ಅಡಿಕೆ ಆಮದು: ಪ್ರಾಂತ ರೈತ ಸಂಘ ಖಂಡನೆ
ಶ್ರೀಲಂಕಾದಿಂದ ಖಾಸಗಿ ಕಂಪನಿಯೊಂದು 5ಲಕ್ಷ ಟನ್ ಅಡಿಕೆ ಆಮದು ಮಾಡಲು ಮುಂದಾಗಿದೆ ಎನ್ನುವ ಪತ್ರಿಕಾ ಸುದ್ದಿ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಅಡಿಕೆ ಫಸಲು ಮಾರಾಟಕ್ಕಾಗಿ ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ಅಡಿಕೆ ಆಮದು ಅಡಿಕೆ ಬೆಲೆ ಕುಸಿತಕ್ಕೆ ಕಾರಣವಾಗಲಿದೆ. ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಅಡಿಕೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಸಹಸ್ರಾರು ಕುಟುಂಬಗಳ ಜೀವನಾಧಾರ ಆಗಿದೆ.
ಅಡಿಕೆ ಬೆಲೆ ಕುಸಿತ ರೈತರ ಜೀವನ ಸಂಕಷ್ಟಕ್ಕೆ ದೂಡಲಿದೆ. ಕೇಂದ್ರ ಸರಕಾರ ಕೂಡಲೇ ಆಮದನ್ನು ತಡೆಹಿಡಿದು ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಉಡುಪಿ ಜಿಲ್ಲಾ ಸಂಚಲನ ಸಮಿತಿ ಒತ್ತಾಯಿಸುತ್ತದೆ.
ಚಂದ್ರಶೇಖರ್ ವಿ
ಜಿಲ್ಲಾ ಸಂಚಾಲಕರು