ಕಾಪು: ಬೀಚ್‌ನಲ್ಲಿ ಮುಳುಗಿ ಪ್ರವಾಸಿಗರಿಬ್ಬರ ಸಾವು
ಕಾಪು: (ಉಡುಪಿ ಟೈಮ್ಸ್ ವರದಿ) ಬೀಚಿನಲ್ಲಿ ಈಜಾಡಲು ನೀರಿಗಿಳಿದ ಐವರ ತಂಡದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ರವಿವಾರ ನಡೆದಿದೆ.
ಪ್ರವಾಸಕ್ಕೆ ಆಗಮಿಸಿದ ಬೆಂಗಳೂರಿನ ಹೇಸರಘಟ್ಟದ ಐವರು ಸಮುದ್ರಕ್ಕೆ ಈಜಾಡಲು ಕಾಪು ಬೀಚ್ ಗೆ ಇಳಿದಿದ್ದರು.
ಮೂವರು ಸ್ನೇಹಿತರು ಈಜಾಡಿ ನಂತರ ಮೇಲಕ್ಕೆ ಬಂದಿದ್ದರು. ಆದರೆ ರೂಪೇಶ್ (23) ಮತ್ತು ಕಾರ್ತಿಕ್ (24) ಸಮುದ್ರದಲ್ಲಿ ಈಜಾಡುತ್ತ ಮುಂದಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಈ ಅಲೆಯಲ್ಲಿ ಈಜಾಡಲು ಆಗದೆ ಇಬ್ಬರು ಕೊಚ್ಚಿ ಹೋಗಿದ್ದರು, ಸ್ಥಳೀಯರು ರಕ್ಷಿಸಿಸಲು ಪ್ರಯತ್ನ ಪಟ್ಟರೂ ಆದಾಗಲೇ ಇಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟರೆಂದು ಕಾಪು ಪೊಲೀಸರು ತಿಳಿಸಿದ್ದಾರೆ.
\