ಕುಂದಾಪುರ: ನಕಲಿ ಕಾಗದ ಪತ್ರ ತಯಾರಿಸಿ ಕರ್ಣಾಟಕ ಬ್ಯಾಂಕ್‌ಗೆ ಕೋಟ್ಯಾಂತರ ರೂ.ವಂಚಿಸಿದ ದಂಪತಿಗಳು


ಶಂಕರನಾರಾಯಣ: ಇಲ್ಲಿನ ಸಿದ್ದಾಪುರ ಗೇರುಬೀಜ ಫ್ಯಾಕ್ಟರಿಯ ಮಾಲಕನೊರ್ವ ವಹಿವಾಟಿನ ನಕಲಿ ಕಾಗದ ಪತ್ರ ತಯಾರಿಸಿ ಕರ್ಣಾಟಕ ಬ್ಯಾಂಕಿಗೆ ಕೋಟ್ಯಾಂತರ ರೂ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.


ಸಿದ್ದಾಪುರ ಗಜಾನನಾ ಕ್ಯಾಶೂ ಇಂಡಸ್ಟ್ರೀಸ್ ಮಾಲಕರಾದ ರಾಘವೇಂದ್ರ ಹೆಮ್ಮಣ್ಣ ಮತ್ತು ಇತನ ಪತ್ನಿ ಆಶಾಕಿರಣ ಹೆಮ್ಮಣ್ಣ, ಹೆಮ್ಸ್ ಪುಡ್ಸ್ ಪ್ರೈ ಲಿಮಿಟೆಡ್ ಕಂಪೆನಿಯನ್ನು ತೆರೆದು ವಾರ್ಷಿಕ ವಹಿವಾಟು 10,90,60,855ರೂ. ಇದೆಂದು ನಕಲಿ ಆಡಿಟ್ ತೋರಿಸಿ ವಂಚಿಸಿದ್ದಾಗಿ ವಂಚನೆ ಮಾಡಿರುವ ಬಗ್ಗೆ ಕರ್ಣಾಟಕ ಬ್ಯಾಂಕ್ ಸಿದ್ದಾಪುರ ಶಾಖೆಯ ಪ್ರಬಂಧಕ ಶಂಕರ ನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ನಕಲಿ ಆಡಿಟ್ ವರದಿಯನ್ನಾದರಿಸಿ ಬ್ಯಾಂಕ್ ಆರೋಪಿಗೆ ಬ್ಯಾಂಕಿನವರು ಒವರ್ ಡ್ರಾಪ್ಟ ಸಾಲವಾಗಿ 3,75,00,000,/- ರೂಪಾಯಿ ಹಾಗೂ ಮೆಶೀನ್ ಖರೀದಿ ಬಗ್ಗೆ 2,70,00,000/- ರೂಪಾಯಿ ಮತ್ತು ಹೊಸ ಕಟ್ಟಡ ಕಟ್ಟಲು 25,00,000/- ರೂಪಾಯಿ ಸಾಲವನ್ನು ಬೇರೆ ಬೇರೆ ದಿನಾಂಕಗಳದ್ದು ನೀಡಿರುತ್ತಾರೆ, ಆ ಬಳಿಕ ಆರೋಪಿಗಳು ಸಾಲದ ಕಂತನು ಸರಿಯಾಗಿ ಕಟ್ಟದೆ ಇದ್ದು ಈ ಸಮಯ ಬ್ಯಾಂಕಿನವರು ಆರೋಪಿಯ ಕಂಪೆನಿಯ ವೆಬ್ ಸೈಟ್‌ನ್ನು ಪರಿಶೀಲಿಸಿದಾಗ ಅದರಲ್ಲಿ ಕಂಪೆನಿಯ ವಾರ್ಷಿಕ ವ್ಯಾಪಾರ ವಹಿವಾಟು 15,08.432.83/- ರೂಪಾಯಿ ಎಂದು ತಿಳಿಯುತ್ತದೆ.


ಆರೋಪಿಗಳು ಕರ್ಣಾಟಕ ಬ್ಯಾಂಕ ಸಿದ್ದಾಪುರ ಶಾಖೆಗೆ ಮೋಸ ಮಾಡುವ ಉದ್ದೇಶದಿಂದ ಒಂದೆ ಕಂಪೆನಿಯ ಹೆಸರಿನಲ್ಲಿ ಎರಡು ಆಡಿಟ್ ವರದಿಯನ್ನು ತಯಾರು ಮಾಡಿ ಹೆಚ್ಚು ಆದಾಯ ಹಾಗೂ ಸೇಲ್ಸ ಇರುವ ಆಡಿಟ್ ವರದಿಯನ್ನು ಬ್ಯಾಂಕಿಗೆ ನೀಡಿ ಸಾಲ ಪಡೆದುಕೊಂಡು ಸಾಲ ಸರಿಯಾಗಿ ಮರುಪಾವತಿ ಮಾಡಿರುವುದಿಲ್ಲ. ಒಟ್ಟು 6,74,77,414.31  /- ರೂಪಾಯಿ ಬಾಕಿ ಇರುತ್ತದೆ. ಅಲ್ಲದೆ ಆರೋಪಿಗಳು ಕಂಪೆನಿಯ ದಾಸ್ತಾನು 5,27,00,000/- ರೂಪಾಯಿ ಎಂದು ತೋರಿಸಿದ್ದು ದಾಸ್ತಾನು ಕೊಠಡಿ ಪರಿಶೀಲಿಸಿದಾಗ ಕಂಪೆನಿಯ ಯಾವುದೇ ಉತ್ಪನಗಳು ದಾಸ್ತಾನು ಇರಲಿಲ್ಲ. ಈ ಬಗ್ಗೆ ದಂಪತಿಗಳ ವಿರುದ್ದ ಕರ್ಣಾಟಕ ಬ್ಯಾಂಕ್ ಸಿದ್ದಾಪುರ ಶಾಖೆಯ ಪ್ರಬಂಧಕ ಶ್ರೀನಿವಾಸ  ಶೆಣೈ ದೂರು ನೀಡಿರುತ್ತಾರೆ.

8 thoughts on “ಕುಂದಾಪುರ: ನಕಲಿ ಕಾಗದ ಪತ್ರ ತಯಾರಿಸಿ ಕರ್ಣಾಟಕ ಬ್ಯಾಂಕ್‌ಗೆ ಕೋಟ್ಯಾಂತರ ರೂ.ವಂಚಿಸಿದ ದಂಪತಿಗಳು

  1. Strict action should be taken against the fraud people who are cheated Crores of rupees to the said bank.

  2. If guy asked for 1 Lac business loan after submitting all the necessary documents also these bank managers treat him like a thief now look at the condition of bank people how they are suffering to recover. Even nepotism is there in banking sectors also.

  3. Bank could have verified the sales figures in question with the website of the said industry earlier instead after sanctioning the loan

  4. Bank could have verified the sales figures in question with the website of the said industry earlier instead after sanctioning the loan

  5. There may be an understanding between T

    he Bank& the fraudster.if a bank blindly sanction crores of Rupees loan without verifying the doccuments they should be held responsible,more over these banks never treat ordinary honest customers with repect & never give a small loan to the the needy customer.

  6. 100 % karnataka bank superiors should be questioned ,without superiors how can one branch provide such a huge amount. simple sense it is, bank zonal heads should be questioned not clerks ,officers or a bank branch manager.

Leave a Reply

Your email address will not be published. Required fields are marked *

error: Content is protected !!