ಮದ್ದಲೆಯ ಮಾಂತ್ರಿಕ, ಶತಾಯುಷಿ ಹಿರಿಯಡ್ಕ ಗೋಪಾಲ್ ರಾವ್ ಇನ್ನಿಲ್ಲ
ಉಡುಪಿ: (ಉಡುಪಿ ಟೈಮ್ಸ್ ವರದಿ) ಮದ್ದಲೆಯ ಮಾಂತ್ರಿಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಿರಿಯಡ್ಕ ಗೋಪಾಲ್ ರಾವ್ (101ವರ್ಷ) ಶನಿವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು.
ಹಿರಿಯಡ್ಕ ಸಮೀಪ ಓಂತಿಬೆಟ್ಟಿನಲ್ಲಿ ಸರಳ ಜೀವನ ನಡೆಸುತ್ತಿರುವ ಈ ಮದ್ದಳೆಯ ಮಾಂತ್ರಿಕರು 1919ರಲ್ಲಿ ಹಿರಿಯಡ್ಕ ಶೇಷಗಿರಿ ರಾವ್ ಮತ್ತು ಲಕ್ಷ್ಮೀ ದಂಪತಿಯ ಪುತ್ರನಾಗಿ ಜನಿಸಿದ್ದರು. ಉಡುಪಿಯ ಅನಂತೇಶ್ವರ ಶಾಲೆಯಲ್ಲಿ ಆರನೇ ತರಗತಿ ಕಲಿತಿದ್ದರು. ತಂದೆ ಆಯುರ್ವೇದ ವೈದ್ಯರಾಗಿದ್ದು ಮದ್ದಳೆವಾದನವನ್ನು ತಿಳಿದಿದ್ದರಿಂದ ಎರಡನ್ನು ಮಗನಿಗೆ ಧಾರೆಯೆರೆದರು. ಯಕ್ಷಗಾನದ ಅಭದ್ರತೆಯ ನಡುವೆ ವೈದ್ಯ ವೃತ್ತಿ ಅವರಿಗೆ ಭದ್ರತೆ ನೀಡಿತು. ಮದ್ದಳೆವಾದನ ಮತ್ತು ಕುಣಿತವನ್ನು ಹಿರಿಯಡ್ಕದ ಗುರಿಕಾರ ನಾಗಪ್ಪ ಕಾಮತರಿಂದ ಪಡೆದ ಇವರು 1934ರಲ್ಲಿ ವಿಠಲ ಹೆಗ್ಡೆಯವರ ನೇತೃತ್ವದ ಹಿರಿಯಡ್ಕ ಮೇಳ ಸೇರಿದರು. ಮೇಳದ ಹೊಣೆಹೊತ್ತ ಶೇಷಗಿರಿ ರಾಯರು ಮಗನನ್ನು ವೇಷಧಾರಿಯಾಗಿ ಆ ಮೇಳಕ್ಕೆ ಸೇರಿಸಿದರು. ಮಾತಿಗೆ ಬೇಕಾದ ಸಾಹಿತ್ಯದಲ್ಲಿ ಹಿಂದೆ ಬಿದ್ದ ರಾಯರನ್ನು ಒತ್ತು ಮದ್ದಳೆಗೆ ಸೂಚಿಸಿದರು. ಒತ್ತು ಮದ್ದಳೆಗಾರ ಚಂಡೆಯನ್ನು ಬಾರಿಸಬೇಕಾದದ್ದು ಅಂದಿನ ಮೇಳಗಳಲ್ಲಿ ರೂಢಿಯಾಗಿತ್ತು. ಹೀಗೆ ಎರಡು ವರ್ಷ ಹಿರಿಯಡ್ಕ ಮೇಳದಲ್ಲಿ ಸೇವೆ ಸಲ್ಲಿಸಿದರು. ನಂತರ ಅವರಿಗೆ ಮುಖ್ಯ ಮದ್ದಳೆಗಾರರಾಗುವ ಯೋಗ ಲಭಿಸಿತ್ತು. 1972ರಲ್ಲಿ ರಾಜ್ಯ ಸರ್ಕಾರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, 1984ರಲ್ಲಿ ರಾಜ್ಯ ಸರ್ಕಾರ ಗೌರವಧನ ಪ್ರಧಾನ, 1992ರಲ್ಲಿ ರಾಜ್ಯ ಸಾಹಿತ್ಯ ಪರಿಷತ್ ಸನ್ಮಾನ, 1997ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ 2012ರಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ಪ್ರಶಸ್ತಿ 2018ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ |
Deep condolence for the demise of Hiriadka Gopala Rao, (101 years ).