ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 2024 ವಿಶ್ವ ಸುಂದರಿ ಪಟ್ಟ

ಮುಂಬೈ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 2024ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆಷನ್ ಸೆಂಟರ್ ನಲ್ಲಿ ನಿನ್ನೆ ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವಸುಂದರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಭಾರತದಿಂದ ಸ್ಪರ್ಧಿಸಿದ್ದ ಸಿನಿ ಶೆಟ್ಟಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುವಂತಾಯಿತು.ಮಿಸ್ ಲೆಬನಾನ್‌ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು. ಕಳೆದ ಬಾರಿಯ ವಿಜೇತೆ ಪೋಲೆಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ತಮ್ಮ ಉತ್ತರಾಧಿಕಾರಿ ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟವನ್ನು ತೊಡಿಸಿದರು.

ಕ್ರಿಸ್ಟಿನಾ 111 ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಗೆಲುವು ಸಾಧಿಸಿದ್ದಾರೆ. ಪೊಲೆಂಡ್‌ ಮೂಲದ 2022ನೇ ಸಾಲಿನ ವಿಶ್ವ ಸುಂದರಿ ಕರೋಲಿನಾ ಬಿಲಾವೆಸ್ಕಾ ಅವರು ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟವನ್ನು ತೊಡಿಸಿದ್ದಾರೆ.

ಇತ್ತೀಚೆಗೆ ಪ್ರಕಟವಾದ ಮಾಹಿತಿ ಪ್ರಕಾರ, ಪಿಸ್ಕೋವಾ ಅವರು ಕಾನೂನು ಮತ್ತು ವ್ಯವಹಾರ ಆಡಳಿತದಲ್ಲಿ ಪ್ರತ್ಯೇಕ ಪದವಿಗಳನ್ನು ಪಡೆಯುತ್ತಿದ್ದಾರೆ. 20ರ ಹರೆಯದಲ್ಲಿರು ವ ಪಿಸ್ಕೋವಾ ಅವರು ಕ್ರಿಸ್ಟಿನಾ ಪಿಸ್ಕೊ ​​ಫೌಂಡೇಶನ್‌ ನ ಸಂಸ್ಥಾಪಕಿಯೂ ಹೌದು. ಇಂಗ್ಲಿಷ್, ಪೋಲಿಷ್, ಸ್ಲೋವಾಕ್ ಮತ್ತು ಜರ್ಮನ್ ಭಾಷೆಗಳಲ್ಲಿ ನಿರರ್ಗಳವಾಗಿರುವ ಮಾಡೆಲ್, ಶಿಕ್ಷಣದ ಮೂಲಕ ಸುಸ್ಥಿರ ಅಭಿವೃದ್ಧಿಗಾಗಿ ಪ್ರತಿಪಾದಕರಾಗಿದ್ದಾರೆ.

28 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಸ್ಪರ್ಧೆ ಆಯೋಜಿಸಿತ್ತು. ಭಾರತ ಇದುವರೆಗೆ 6 ವಿಶ್ವ ಸುಂದರಿ ಪಟ್ಟ ಗಳಿಸಿದೆ. ಮೊದಲ ಬಾರಿಗೆ ಮೊದಲ ಬಾರಿಗೆ ರೀಟಾ ಫರಿಯಾ 1966ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು. ನಂತರ ಐಶ್ವರ್ಯಾ ರೈ ಬಚ್ಚನ್‌ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!