ನನಗೆ ಟಿಕೆಟ್ ಸಿಗಲಿ ಅಥವಾ ಸಿಗದಿರಲಿ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ- ಕೇಂದ್ರ ಸಚಿವೆ ಶೋಭಾ

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದೆ. ಕೆಲವರು ನನ್ನ ವಿರುದ್ಧ ಪಿತೂರಿ ಸಹ ನಡೆಸಿದ್ದಾರೆ. ಇದನ್ನು ಹೈಕಮಾಂಡ್ ಸಹ ಗಮನಿಸಿದೆ. ನಾನು ಹತ್ತು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ನನಗೆ ಟಿಕೆಟ್ ಸಿಗಲಿ ಅಥವಾ ಸಿಗದಿರಲಿ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದಲೇ ನನಗೆ ಪಕ್ಷವು ನಾಯಕ ಸ್ಥಾನ ನೀಡಿದೆ ಎಂದರು.

ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಅದು ಹೈಕಮಾಂಡಿಗೆ ಬಿಟ್ಟ ವಿಚಾರ‌ ಆದರೆ ಒಳ್ಳೆಯ ಸ್ಥಾನಮಾನ ಹಾಗೂ ಗೌರವ ಸಿಗುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಹೇಗಿದೆ ಎಂದರೆ ಇಲ್ಲಿ ಬಹುಸಂಖ್ಯಾತರಿಗೆ ರಕ್ಷಣೆ ಇಲ್ಲ. ಅಲ್ಪಸಂಖ್ಯಾತರಿಗೆ ಎಲ್ಲವೂ ಇದೆ. ಅವರಿಗೆ ಮೃಷ್ಠಾನ್ನ ಭೋಜನ. ನಮಗೆ ಒಣರೊಟ್ಟಿ ಊಟ ಸ್ಥಿತಿ ನಿರ್ಮಾಣವಾಗಿದೆ. ವಿಧಾನಸೌಧ, ಮುಖ್ಯಮಂತ್ರಿಗಳ ಕಚೇರಿ ಮತ್ತು ಮನೆ ಭಯೋತ್ಪಾದನೆ ಬೆಳೆಸುವ ಕೇಂದ್ರಗಳಾಗಿವೆ. ನಾವು ನಿಷೇಧ ಮಾಡಿರುವ ಸಂಘಟನೆಗಳ ಸದಸ್ಯರು ಇವರ ಮನೆ ಕಚೇರಿ ಹಾಗೂ ಗೃಹಸಚಿವರ ಮನೆಯ ಮುಂದೆ ಕುಳಿತಿರುತ್ತಾರೆ ಎಂದರು.

ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಸಾವಿರದಷ್ಟು ಬೆಂಬಲಿಗರು ವಿಧಾನಸೌಧಕ್ಕೆ ಹೇಗೆ ಬಂದರು. ಅವರಿಗೆ ಯಾರು ಪಾಸುಗಳನ್ನು ಕೊಟ್ಟರು ಎಂದು ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕರ್ನಾಟಕ ಭಯೋತ್ಪಾದಕರ ಸುರಕ್ಷಿತ ಅಡಗುತಾಣವಾಗಿದೆ‌. ನಮಗೆ ಇದು ಬಹಳ ಸುರಕ್ಷಿತ ಸ್ಥಳ, ಇಲ್ಲಿನ ಸಚಿವರು ನಮ್ಮ ರಕ್ಷಣೆಗೆ ಬರುತ್ತಾರೆ ಎಂಬ ಭಾವನೆ ಅವರಲ್ಲಿದೆ. ಇದೇ ಕಾರಣದಿಂದ ಇಂತಹ ದೇಶದ್ರೋಹ ಘಟನೆಗಳು ನಡೆಯುತ್ತಿವೆ. ಕಾಂಗ್ರೆಸ್ ಸರಕಾರಕ್ಕೆ ಕೇವಲ ಮತ ಬ್ಯಾಂಕ್ ಚಿಂತೆ. ಅದಕ್ಕಾಗಿ ಅವರು ಏನೂ ಮಾಡಲು ಸಿದ್ಧ ಎಂದು ವಾಗ್ದಾಳಿ ನಡೆಸಿದರು.

1 thought on “ನನಗೆ ಟಿಕೆಟ್ ಸಿಗಲಿ ಅಥವಾ ಸಿಗದಿರಲಿ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ- ಕೇಂದ್ರ ಸಚಿವೆ ಶೋಭಾ

  1. Hathu varshadali yen dhabakidi swalpa helthiya..ninna hotte tumbisirvi aste bitre rajyada janathege ninna koduge shunya..ni jiva agodu vote barwa time bitre komu galabe agwaga benki hachlike ready erthi aste ninna sadhane…

Leave a Reply

Your email address will not be published. Required fields are marked *

error: Content is protected !!