ಬ್ಯಾಂಕ್ ನೌಕರರಿಗೆ‌ ಸಿಹಿ‌ ಸುದ್ದಿ… ವೇತನ ಹೆಚ್ಚಳ ಸಹಿತ ವಾರದಲ್ಲಿ 5 ದಿನ ಕೆಲಸ!

ನವದೆಹಲಿ: ಬ್ಯಾಂಕ್ ನೌಕರರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಶೇ. 17 ರಷ್ಟು ವಾರ್ಷಿಕ ವೇತನ ಭತ್ಯೆ ಹೆಚ್ಚಳವನ್ನು ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಶುಕ್ರವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ವಾರ್ಷಿಕವಾಗಿ ಸುಮಾರು 8,284 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

ನವೆಂಬರ್ 2022 ರಿಂದ ಜಾರಿಗೆ ಬರಲಿರುವ ವೇತನ ಹೆಚ್ಚಳದಿಂದ ಸುಮಾರು 8 ಲಕ್ಷ ಬ್ಯಾಂಕ್ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೇ ಸರ್ಕಾರಿ ಅಧಿಸೂಚನೆಗೆ ಬಾಕಿಯಿರುವ ಎಲ್ಲಾ ಶನಿವಾರಗಳನ್ನು ರಜೆಯೆಂದು ಗುರುತಿಸುವ ಜಂಟಿ ಟಿಪ್ಪಣಿಯನ್ನು ಒಪ್ಪಿಕೊಳ್ಳಲಾಗಿದೆ. ಪರಿಷ್ಕೃತ ಕೆಲಸದ ಸಮಯವು ಸರ್ಕಾರದ ಅಧಿಸೂಚನೆಯ ನಂತರ ಜಾರಿಗೆ ಬರಲಿದೆ ಎಂದು ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ತಿಳಿಸಿದೆ.

“8088 ಅಂಕಗಳಿಗೆ ಅನುಗುಣವಾದ ತುಟ್ಟಿಭತ್ಯೆ ಮತ್ತು ಹೆಚ್ಚುವರಿ ಹೊರೆಯನ್ನು ವಿಲೀನಗೊಳಿಸಿದ ನಂತರ ಹೊಸ ವೇತನ ಶ್ರೇಣಿಗಳನ್ನು ಪರಿಷ್ಕರಿಸಲಾಗಿ ದೆ. ಹೊಸ ವೇತನ ಪರಿಷ್ಕರಣೆಯಡಿ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ವೈದ್ಯಕೀಯ ಪ್ರಮಾಣಪತ್ರವನ್ನು ನೀಡದೆ ತಿಂಗಳಿಗೆ ಒಂದು ದಿನ ಅನಾರೋಗ್ಯ ರಜೆ ತೆಗೆದುಕೊಳ್ಳಲು ಅನುಮತಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಐಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮೆಹ್ತಾ, ಯುಎಫ್ ಬಿಯು ಮತ್ತಿತರು ಬ್ಯಾಂಕ್ ನೌಕರರು ಸಂಘಗಳು ವೇತನ ಪರಿಷ್ಕರಣೆ ಕುರಿತ 9ನೇ ಜಂಟಿ ಟಿಪ್ಪಣಿ ಮತ್ತು 12 ದ್ವಿಪಕ್ಷೀಯ ಇತ್ಯರ್ಥ ಮತ್ತು ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಪರಿಷ್ಕೃತ ವೇತನಕ್ಕೆ ಸಹಿ ಹಾಕಿರುವುದರಿಂದ ಇದು ಬ್ಯಾಂಕಿಂಗ್ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!