ಉಡುಪಿ: ಮಾ.13 ಗ್ಯಾರಂಟಿ ಸಮಾವೇಶ- ಸಿಎಂ ಸಿದ್ದರಾಮಯ್ಯ ಭಾಗಿ

ಉಡುಪಿ: ರಾಜ್ಯ ಸರಕಾರವು ತನ್ನ 5 ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ ಯೋಜನೆ, ಗ್ರಹ ಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವ ನಿಧಿ ಇವೆಲ್ಲವನ್ನು ಅತ್ಯಂತ ಯಶಸ್ವಿಯಾಗಿ ರಾಜ್ಯದ ಪ್ರತಿಯೊಂದು ಜನಸಾಮಾನ್ಯರಿಗೆ ತಲುಪಿಸಿ ನುಡಿದಂತೆ ನಡೆದಿದ್ದುˌ ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಮಾ.13ರ ಬುಧವಾರ ಉಡುಪಿಯ ಎಮ್.ಜಿ.ಎಮ್. ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕರ್ತರು ಬೂತು ಮಟ್ಟದಲ್ಲಿ ಫಲಾನುಭವಿಗಳ ನ್ನು ಗುರುತಿಸಿ ಸಮಾವೇಶದಲ್ಲಿ ಭಾಗವಹಿಸುವಂತೆ ತೊಡಗಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಅವರು ಮಾತನಾಡಿ ಬಡವರಿಗೆ ಆರ್ಥಿಕ ಶಕ್ತಿ ನೀಡುವ ಸಾಮಾಜಿಕ ಹಾಗೂ ಶೈಕ್ಷಣಿಕ ಉನ್ನತಿಗೆ ನೆರವಾಗುವ ಕಾರ್ಯಕ್ರಮಗಳನ್ನು ಜಾರಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಅಂತಹ ಬದ್ಧತೆ ಇರುವುದು ನಮ್ಮ ಪಕ್ಷಕ್ಕೆ ಮಾತ್ರ ˌ ಗ್ಯಾರಂಟಿ ಯೋಜನೆಗಳನ್ನು ಲೇವಡಿಮಾಡುತ್ತಾ ಈ ಯೋಜನೆಯಿಂದ ಆರ್ಥಿಕತೆ ನಾಶ ಹೊಂದುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯೇ ಈಗ ಮೋದಿ ಗ್ಯಾರಂಟಿ ಎಂದು ಜಪ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷದ ಯೋಜನೆಗಳು ಜನರ ಬದುಕಿಗೆ ಆಸರೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಸರಕಾರ ಆಯೋಜಿಸಿದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸ ಬೇಕೆಂದು ಹೇಳಿದರು.

ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ˌ ಮುಖಂಡರಾದ ಎಂ.ಎ.ಗಪೂರ್, ಹಿರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿˌ ದಿನೇಶ್ ಪುತ್ರನ್, ರಾಜು ಪೂಜಾರಿ, ನೀರೆ ಕೃಷ್ಣಶೆಟ್ಟಿˌˌ ಬಿ ನರಸಿಂಹಮೂರ್ತಿˌ ಹರೀಶ್ ಕಿಣಿ, ಬಿಪಿನ್ ಚಂದ್ರಪಾಲ್ ನಕ್ರೆ, ವೆರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಸರಸುಬಂಗೇರ, ನವೀನ್ ಚಂದ್ರ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಸುವರ್ಣ, ರಮೇಶ್ ಕಾಂಚನ್, ಸಂತೋಷ್ ಕುಲಾಲ್, ಸದಾಶಿವ ದೇವಾಡಿಗˌ ಮಹಾಬಲ ಕುಂದರ್, ಡಾ. ಸುನಿತಾ ಶೆಟ್ಟಿ, ರೇವತಿ ಶೆಟ್ಟಿ, ರೋಶನಿ ಒಲಿವರಾˌ ಮಮತಾ ಶೆಟ್ಟಿ, ಕೀರ್ತಿ ಶೆಟ್ಟಿˌ ದಿವಾಕರ್ ಕುಂದರ್ˌ ಪ್ರಸನ್ನ ಕುಮಾರ್ ಶೆಟ್ಟಿ, ಕಿರಣ್ ಹೆಗ್ಡೆ ˌ ರೋಶನ್ ಶೆಟ್ಟಿ ˌ ವೈ.ಸುಕುಮಾರ್ˌ ಕಿಶೋರ್ ಕುಮಾರ್ ಎರ್ಮಾಳ್ ˌ ದಿಲೀಪ್ ಹೆಗ್ಡೆˌ ಸುರೇಶ್ ಶೆಟ್ಟಿ ಬನ್ನಂಜೆˌ ಶೇಕ್ ವಹಿದ್ ಖಾನ್ ˌ ಬಾಲಕೃಷ್ಣ ಪೂಜಾರಿˌ ಜಯಕುಮಾರ್, ಹರಿಶ್ ಶೆಟ್ಟಿ ಪಾಂಗಾಳ ˌ ಶಶಿಧರ ಶೆಟ್ಟಿ ಎಲ್ಲೂರು, ದೀಪಕ್ ಕೊಟ್ಯಾನ್, ಆನಂದ ಪೂಜಾರಿ, ಸತೀಶ್ ಕೊಡವೂರು ˌ ವಿಶ್ವಾಸ್ ಅಮೀನ್, ಯತೀಶ್ ಕರ್ಕೆರ ಉಪಸ್ಥಿತರಿದ್ಧರು. ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಬಿ.ಕುಶಲ ಶೆಟ್ಟಿ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಧನ್ಯವಾದವಿತ್ತರುˌ ಸಹಕಾರಿ ಕಾಂಗ್ರೆಸ್‌ನ ಅಧ್ಯಕ್ಷರಾದ ಅಣ್ಟಯ್ಯ ಸೇರಿಗಾರ್ ಹಾಗೂ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!