ಕುಂದಾಪುರ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾ ಸಂಸ್ಥೆ: ಯಕ್ಷಗಾನ ಹೆಜ್ಜೆ-ಕಿರು ನೋಟ
ಕುಂದಾಪುರ:ಐಎಂಜೆವಿಜ್ಞಾನ ಮತ್ತು ವಾಣಿಜ್ಯ ವಿದ್ಯಾ ಸಂಸ್ಥೆ ಮೂಡ್ಲಕಟ್ಟೆ, ಕುಂದಾಪುರದಲ್ಲಿ ಮಾ.5ರಂದು ಲಲಿತ ಕಲಾಸಂಘಮತ್ತು ಓದುಗರ ಸಂಘದ ಜಂಟಿ ಆಶ್ರಯದಲ್ಲಿ“ಯಕ್ಷಗಾನ ಹೆಜ್ಜೆ–ಕಿರುನೋಟ” ಕಾರ್ಯಕ್ರಮವು ನೆರವೇರಿತು.
ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ಸಿಎಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿಯವರಾದ ಪ್ರೊ.ಸೂಕ್ಷ್ಮ ಅಡಿಗರವರು ಗೆಜ್ಜೆಯನ್ನು ಅನಾವರಣ ಮಾಡುವ ಮೂಲಕ ಉದ್ಘಾಟಿಸಿ, ಮಾತನಾಡಿ, “ಯಕ್ಷಗಾನ ಕರಾವಳಿಯಲ್ಲಿ ಶ್ರೇಷ್ಠಕಲೆ. ಇದು ಮನೋರಂಜನ ಕಲೆ ಅನ್ನೋದಕ್ಕಿಂತ ಇದೊಂದು ಆರಾಧನಾ ಕಲೆ. ಯಕ್ಷಗಾನದ ಜೀವಾಳವೇ ಭಾಗವತಿಕೆ. ಇಲ್ಲಿ ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳು ಇರುತ್ತವೆ. ಹಿಂದೆ ಕಾವ್ಯ ಪ್ರಕಾರಗಳಲ್ಲಿ ಇದ್ದಂತಹ ಪೌರಾಣಿಕ ವಿಚಾರಗಳು ಸಾಮಾನ್ಯ ಜನರಿಗೆ ಅರ್ಥವಾಗದ ಕಾರಣ ಅದರ ಪ್ರಚಾರಕ್ಕಾಗಿ ಯಕ್ಷಗಾನ ಹುಟ್ಟಿಕೊಂಡಿತು. ಹೀಗೆ ಯಕ್ಷಗಾನದ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಪ್ರಾಂಶುಪಾಲೆಯವರಾದ ಡಾ. ಪ್ರತಿಭಾ ಎಂ ಪಟೇಲ್ ವಿದ್ಯಾರ್ಥಿಗಳಿಗೆ ಈ ಸಾಂಪ್ರದಾಯಿಕ ಯಕ್ಷಗಾನ ಕಲೆಯ ಮಹತ್ವದ ಕುರಿತು ತಿಳಿಸಿದರು. ಉಪಪ್ರಾಂಶುಪಾಲ ಪ್ರೊ.ಜಯಶೀಲ್ ಕುಮಾರ್, ಲಲಿತ ಕಲಾಸಂಘದ ಸಂಯೋಜಕಿ ಪ್ರೊ.ಸುಮನ, ಓದುಗರ ಸಂಘದ ಸಂಯೋಜಕಿ ಪ್ರೊ.ಪಾವನ ಮತ್ತು ಯಕ್ಷಗಾನ ಕಲಾವಿದೆಯಾದ ಬಿಸಿಎ ವಿದ್ಯಾರ್ಥಿನಿ ಕು. ಸನ್ನಿಧಿ ಪಿ.ವೈ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿಸಿಎ ವಿಭಾಗದ ವಿದ್ಯಾರ್ಥಿನಿ ರಶಿತಾ ಶೆಟ್ಟಿ ಅವರು ನಿರೂಪಿಸಿದರು.ಕು.ಭಾನುಮತಿ ಪ್ರಾರ್ಥಿಸಿ, ಯಕ್ಷಗಾನದ ಕುರಿತಾದ ಲೇಖನವನ್ನು ಕು. ವೈಭವಿ ಮತ್ತು ಕು. ಸನ್ನಿಧಿ ಪಿವೈ ಓದಿದರು.ಯಕ್ಷಗಾನ ಕಲಾವಿದೆ ಕು.ಸನ್ನಿಧಿ ಪಿವೈ ಯವರು ಯಕ್ಷಗಾನದ ಹೆಜ್ಜೆಗಳನ್ನು ಪರಿಚಯಿಸಿದರು. ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸಿದರು. ಯುವ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಕಲೆಗಳ ಔಚಿತ್ಯದ ಬಗ್ಗೆ ಅರಿವು ಮೂಡಿಸಿ, ಅದರ ಕಲಿಕೆಯನ್ನು ಪ್ರೋತ್ಸಾಹಿಸಲಾಯಿತು. ಹಾಗೂ ಯಕ್ಷಗಾನದ ಕುರಿತಾದ ಲೇಖನವನ್ನು ಓದುವ ಮೂಲಕ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಹಿನ್ನಲೆಯ ಅರಿವನ್ನು ಮೂಡಿಸಲಾಯಿತು.