ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್: ಲಯನ್ಸ್ ಗವರ್ನರ್ ಭೇಟಿ

ಉದ್ಯಾವರ: ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಗೆ ಲಯನ್ಸ್ ಜಿಲ್ಲೆ 317ಸಿ ಯ ಗವರ್ನರ್ ಅವರ ಅಧಿಕೃತ ಭೇಟಿ ಹಾಗೂ ಲಯನ್ ಚಾರ್ಟರ್ ನೈಟ್ ಕಾರ್ಯಕ್ರಮ ಶನಿವಾರದಂದು ಬಹಳ ವಿಜೃಂಬಣೆಯಿಂದ ಜರುಗಿತು.

ಮೊದಲಿಗೆ ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಜೈಹಿಂದ್ ಕಾಂಪ್ಲೆಕ್ಸ್ ಬಳಿ ಲಯನ್ಸ್ ಜಿಲ್ಲೆ 317ಸಿ ಯ ಗವರ್ನರ್ ಲ. ನೇರಿ ಕರ್ನೇಲಿಯೊ, ಎಂ.ಜೆ.ಎಫ್ ದಂಪತಿಯವರನ್ನು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ ಅಧ್ಯಕ್ಷರಾದ ಲ. ಪ್ರೇಮ್ ಮಿನೇಜಸ್, ಕಾರ್ಯದರ್ಶಿ ಲ. ಹರೀಶ್ಚಂದ್ರ ಪಿತ್ರೋಡಿ, ಕೋಶಾಧಿಕಾರಿ ಲ.ರೋಶನ್ ಕ್ರಾಸ್ಟಾ. ಲಯನ್ ಪದಾಧಿಕಾರಿಗಳು ಹಾಗೂ ಸದಸ್ಯರು  ಹೂಗುಚ್ಛ ನೀಡಿ ಆದರದಿಂದ ಬರಮಾಡಿಕೊಂಡರು.

ಪಿತ್ರೋಡಿ ಮುಖ್ಯ ರಸ್ತೆಯ ಅಫಘಾತ ವಲಯದ ಬಳಿ ನಿರ್ಮಿಸಿದ ರಸ್ತೆ ತಡೆಗೋಡೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಅವರು ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇವರ ನಿರಂತರ ಸಮಾಜಮುಖೀ ಕಾರ್ಯಕ್ರಮಗಳನ್ನು ಶ್ಲಾಘಿಸಿ ಅಭಿನಂದಿಸಿದರು. ಸೌಹಾರ್ದತೆಯ ಸಂಕೇತವಾಗಿ ಶಂಭುಕಲ್ ದೇವಸ್ಥಾನ, ಜಾಮಿಯಾ ಮಸೀದಿ ಹಾಗೂ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸೌಂದರ್ಯ ರೆಸಿಡೆನ್ಸಿ ಹಾಲ್ ನಲ್ಲಿ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆ ನಡೆಸಿ ಮಾಹಿತಿ ಪಡೆದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲ. ಪ್ರೇಮ್ ಮಿನೇಜಸ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಬಂದ ಅತಿಥಿಗಳನ್ನು ಸಾಗತಿಸಿದರು. ಲ.ಎಡ್ವಿನ್ ಡಿಸೋಜ ಲಯನ್ ನೀತಿ ಸಂಹಿತೆ ವಾಚಿಸಿ  ಲ.ಫ್ರ್ಯಾಂಕ್ ಕಾರ್ಡೋಜ ಧ್ವಜವಂದನೆ ನೆರವೇರಿಸಿದರು. ಕಾರ್ಯದರ್ಶಿ ಲ.ಹರೀಶ್ಚಂದ್ರ ಪಿತ್ರೋಡಿಯವರು 2023-24 ನೇ ಸಾಲಿನ ವಾರ್ಷಿಕ ವರದಿಯನ್ನ ಸವಿವರವಾಗಿ ಮಂಡಿಸಿದರು. ನಂತರ ನಡೆದ ಸೇವಾ ಕಾರ್ಯಕ್ರಮದಲ್ಲಿ ಉದ್ಯಾವರದ ಎರಡು ಕುಟುಂಬಗಳಿಗೆ ಚಿಕಿತ್ಸೆಗೆ ನೆರವನ್ನು ನೀಡಲಾಯಿತು.

ಲ. ನೇರಿ ಕರ್ನೇಲಿಯೊರವರ ಪರಿಚಯವನ್ನು ಲ.ಜಾನ್ ಫೆರ್ನಾಂಡಿಸ್ ರವರು ವಾಚಿಸಿದರು. ಲಯನ್ಸ್ ಜಿಲ್ಲೆ 317ಸಿ ಯ ಗವರ್ನರ್ ಲ. ನೇರಿ ಕರ್ನೇಲಿಯೊ, ಎಂ.ಜೆ.ಎಫ್ ದಂಪತಿಯವರನ್ನು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಪರವಾಗಿ ಸನ್ಮಾನಿಸಲಾಯಿತು. ಲಯನ್ ಇಂಟರ್ ನ್ಯಾಶನಲ್ ನಿಂದ ಉತ್ತಮ ವಲಯಾಧ್ಯಕ್ಷರಾಗಿ ಆಯ್ಕೆಯಾದ ಲ. ಜಾನ್ ಫೆರ್ನಾಂಡಿಸ್ ಹಾಗೂ ಕರ್ನಾಟಕ ಸರಕಾರದಿಂದ ಭೂನ್ಯಾಯ ಮಂಡಳಿಯ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಲ. ರೋಯ್ಸ್ ಫೆರ್ನಾಂಡಿಸ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಲಯನ್ಸ್ ಜಿಲ್ಲೆ 317ಸಿ ಯ ದ್ವಿತೀಯ ಉಪಗವರ್ನರ್ ಲ. ಸಪ್ನಾ ಸುರೇಶ್ ಪಿ.ಎಮ್.ಜೆ.ಎಫ್, ಪ್ರಾಂತೀಯ  ಅಧ್ಯಕ್ಷರಾದ ಲ. ಗಿರಿಜಾ ಶಿವರಾಮ ಶೆಟ್ಟಿ, ಝೋನ್ ಚೇರ್ ಮೆನ್ ಲ.ಸುಧಾಕರ್ ಹೆಗ್ಡೆ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸ್ಥಾಪಕ ಅಧ್ಯಕ್ಷರಾದ ಹೆನ್ರಿ ಡಿಸೋಜ ಎಂ.ಜೆ.ಎಫ್, ನಿಕಟಪೂರ್ವ ಅಧ್ಯಕ್ಷರಾದ ಲ. ಅನಿಲ್ ಲೋಬೊ ಉಪಸ್ಥಿತರಿದ್ದರು. ಲ.ಹರಿಪ್ರಸಾದ್ ರೈ, ಲ.ರಾಜೀವ್ ಕೋಟ್ಯಾನ್, ಸಮಾಜ ಸೇವಕರಾದ ಶೇಕ್ ವಾಹಿದ್ ಹಾಗೂ ವಲಯದ ವಿವಿಧ ಲಯನ್ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲ.ರೋಶನ್ ಕ್ರಾಸ್ಟಾರವರು ವಂದನಾರ್ಪಣೆಗೈದರು. ಲ.ಅನಿಲ್ ಮಿನೇಜಸ್, ಲ.ಪ್ರವೀಣ್ ಪಿಂಟೊ ಹಾಗೂ ಲ. ಮೈಕಲ್ ಡಿಸೋಜವರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!