“ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ”: NDA 378 ಸ್ಥಾನ, I.N.D.I.A ಒಕ್ಕೂಟಕ್ಕೆ ಕೇವಲ 98 ಸ್ಥಾನ!

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಭರ್ಜರಿ 378 ಸ್ಥಾನಗಳು ಸಿಗಲಿವೆ ಎಂದು ಇಂಡಿಯಾ ಟಿವಿ ಹಾಗೂ ಸಿಎನ್ ಎಕ್ಸ್ ಸಂಸ್ಥೆಗಳು ನಡೆಸಿರುವ ಜಂಟಿ ಸಮೀಕ್ಷಾ ವರದಿ ತಿಳಿಸಿದೆ. ಸಮೀಕ್ಷಾ ವರದಿಯು ನಿಜವಾದಲ್ಲಿ, ಬಿಜೆಪಿಗೆ ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ (543) ಬಿಜೆಪಿಗೆ ಶೇ.69 ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆ ಇದೆ.

ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಕೇವಲ 37 ಸ್ಥಾನಗಳನ್ನು ಗಳಿಸಲಿದ್ದು, ದೇಶದ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಶೋಚನೀಯ ಸೋಲನ್ನು ಕಾಣಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ಹೊಂದಿದ್ದಾರೆ. ಆದರೆ, ಅವರ ಗುರಿಗಿಂತ ಕೊಂಚ ಕಡಿಮೆ ಅಂದರೆ, 378 ಸ್ಥಾನಗಳು ಎನ್ ಡಿಎಗೆ ಲಭ್ಯವಾಗಲಿವೆ. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಬಿಜೆಪಿಯು ಈವರೆಗಿನ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದೂ ಕಾಣದಂಥ ಗೆಲುವನ್ನು ಈ ಬಾರಿ ಕಾಣಲಿದೆ. ಬಿಜೆಪಿಗೆ ಈ ಬಾರಿ 330ಕ್ಕೂ ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಷ್ಟಾದರೂ ಈ ಹಿಂದೆ, ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಗಳಿಸಿದ್ದ 415 ಸೀಟುಗಳ ದಾಖಲೆಯನ್ನು ಅಳಿಸಲು ಎನ್ ಡಿಎಗೆ ಸಾಧ್ಯವಾಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

I.N.D.I.A ಒಕ್ಕೂಟದ ಕಳಪೆ ಸಾಧನೆ!

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಬಗ್ಗುಬಡಿಯಬೇಕೆಂಬ ಉದ್ದೇಶದಿಂದ ಕಾಂಗ್ರೆಸ್, ತನ್ನ ಸಮಾನ ಮನಸ್ಕರೆಲ್ಲರನ್ನೂ ಒಗ್ಗೂಡಿಸಿ ರಚಿಸಿಕೊಂಡಿ ರುವ I.N.D.I.A ಒಕ್ಕೂಟವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇವಲ 98 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಲಾಗಿದೆ. ಇನ್ನು, ಇತರೆ ಪಕ್ಷಗಳಿಂದ ಚುನಾವಣೆಗೆ ನಿಂತವರಲ್ಲಿ ಅಥವಾ ಪಕ್ಷೇತರ ಅಭ್ಯರ್ಥಿಗಳಲ್ಲಿ 67 ಮಂದಿ ಮಾತ್ರ ಜಯ ಗಳಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ರಾಜ್ಯವಾರು ಸಮೀಕ್ಷಾ ಫಲಿತಾಂಶ ಹೀಗಿದೆ…

  • ಆಂಧ್ರಪ್ರದೇಶ – ಒಟ್ಟು ಸ್ಥಾನ 25 (ವೈಎಸ್ ಆರ್ ಸಿಪಿ 15, ಟಿಡಿಪಿ 10)
  • ಅರುಣಾಚಲಪ್ರದೇಶ- ಒಟ್ಟು ಸ್ಥಾನ 2(ಬಿಜೆಪಿ -2)
  • ಅಸ್ಸಾಂ – ಒಟ್ಟು ಸ್ಥಾನ 14 (ಬಿಜೆಪಿ 10, ಎಜಿಪಿ 1, ಯುಪಿಪಿಎಲ್ 1, ಕಾಂಗ್ರೆಸ್ 1, ಯುಐಯುಡಿಎಫ್ 1)
  • ಬಿಹಾರ- ಒಟ್ಟು ಸ್ಥಾನ 40(ಬಿಜೆಪಿ 17, ಜೆಡಿಯು 12, ಆರ್ ಜೆಡಿ 4, ಎಲ್ ಜೆಪಿ (ಆರ್) 3, ಆರ್ ಎಲ್ ಜೆಪಿ 1, ಎಚ್ ಎಎಂ 1, ಆರ್ ಎಲ್ ಎಂ 1, ಕಾಂಗ್ರೆಸ್ 1)
  • ಛತ್ತೀಸ್ ಗಡ – ಒಟ್ಟು ಸ್ಥಾನ 11 (ಬಿಜೆಪಿ 10, ಕಾಂಗ್ರೆಸ್ 1)
  • ಗೋವಾ – ಒಟ್ಟು ಸ್ಥಾನ 2 (ಬಿಜೆಪಿ 2)
  • ಗುಜರಾತ್ – ಒಟ್ಟು ಸ್ಥಾನ 26 (ಬಿಜೆಪಿ 26)
  • ಹರ್ಯಾಣ – ಒಟ್ಟು ಸ್ಥಾನ 10 (ಬಿಜೆಪಿ 10)
  • ಹಿಮಾಚಲಪ್ರದೇಶ – ಒಟ್ಟು ಸ್ಥಾನ 4 (ಬಿಜೆಪಿ 4)
  • ಜಾರ್ಖಂಡ್ – ಒಟ್ಟು ಸ್ಥಾನ 14 (ಬಿಜೆಪಿ 12, ಎಜೆಎಸ್ ಯು 1, ಜೆಎಂಎಂ 1)
  • ಕರ್ನಾಟಕ – ಒಟ್ಟು ಸ್ಥಾನ 28 (ಬಿಜೆಪಿ 22, ಜೆಡಿಎಸ್ 2, ಕಾಂಗ್ರೆಸ್ – 4)
  • ಕೇರಳ – ಒಟ್ಟು ಸ್ಥಾನ 20 (ಯುಡಿಎಫ್ 11, ಎಲ್ ಡಿಎಫ್ 6, ಬಿಜೆಪಿ 3) -ಕಾಂಗ್ರೆಸ್ 7, ಸಿಪಿಐ (ಎಂ) 4, ಬಿಜೆಪಿ 3, ಸಿಪಿಐ 1, ಕೆಸಿ (ಎಂ) 1, ಐಯುಎಂಎಲ್ 2, ಆರ್‌ಎಸ್ ಪಿ 1, ಇತರೆ 1
  • ಮಧ್ಯಪ್ರದೇಶ – ಒಟ್ಟು ಸ್ಥಾನ 29 (ಬಿಜೆಪಿ 29)
  • ಮಹಾರಾಷ್ಟ್ರ – ಒಟ್ಟು ಸ್ಥಾನ 48 (ಬಿಜೆಪಿ 25, ಶಿವಸೇನೆ (ಯುಬಿಟಿ) 8, ಎನ್ ಸಿಪಿ (ಅಜಿತ್) 4, ಶಿವಸೇನೆ (ಶಿಂಧೆ) 6, ಎನ್ ಸಿಪಿ (ಶರದ್) 3, ಕಾಂಗ್ರೆಸ್ 2)
  • ಮಣಿಪುರ – ಒಟ್ಟು ಸ್ಥಾನ 2 (ಬಿಜೆಪಿ 1, ಕಾಂಗ್ರೆಸ್ 1)
  • ಮೇಘಾಲಯ – ಒಟ್ಟು ಸ್ಥಾನ 2 (ಎನ್ ಪಿಪಿ 2)
  • ಮಿಜೋರಂ- ಒಟ್ಟು ಸ್ಥಾನ 1 (ಝೆಡ್ ಪಿ ಎಂ 1)
  • ನಾಗಾಲ್ಯಾಂಡ್- ಒಟ್ಟು ಸ್ಥಾನ 1(ಎನ್ ಡಿಪಿಪಿ 1)
  • ಒಡಿಶಾ- ಸ್ಥಾನ 21 (ಬಿಜೆಡಿ11,ಬಿಜೆಪಿ 10)
  • ಪಂಜಾಬ್ – ಒಟ್ಟು ಸ್ಥಾನ 13 (ಆಮ್ ಆದ್ಮಿ ಪಾರ್ಟಿ 6, ಕಾಂಗ್ರೆಸ್ 3, ಬಿಜೆಪಿ 3, ಶಿರೋಮಣಿ ಅಕಾಲಿ ದಳ 1)
  • ರಾಜಸ್ಥಾನ – ಒಟ್ಟು ಸ್ಥಾನ 25 (ಬಿಜೆಪಿ 25)
  • ಸಿಕ್ಕಿಂ – ಒಟ್ಟು ಸ್ಥಾನ 1 (ಎಸ್ ಕೆಎಂ 1)
  • ತಮಿಳುನಾಡು – ಒಟ್ಟು ಸ್ಥಾನ 39 (ಡಿಎಂಕೆ 20, ಎಐಎಡಿಎಂಕೆ 4, ಬಿಜೆಪಿ 4, ಕಾಂಗ್ರೆಸ್ 6, ಪಿಎಂಕೆ 1, ಇತರೆ 4)
  • ತೆಲಂಗಾಣ – ಒಟ್ಟು ಸ್ಥಾನ 17 (ಕಾಂಗ್ರೆಸ್ 9, ಬಿಜೆಪಿ 5, ಬಿಆರ್ ಎಸ್ 2, ಎಐಎಂಐಎಂ 1)
  • ತ್ರಿಪುರಾ – ಒಟ್ಟು ಸ್ಥಾನ 2 (ಬಿಜೆಪಿ 2)
  • ಉತ್ತರ ಪ್ರದೇಶ – ಒಟ್ಟು ಸ್ಥಾನ 80 (ಬಿಜೆಪಿ 74, ಅಪ್ನಾ ದಳ 2, ಆರ್ ಎಲ್ ಡಿ 2, ಎಸ್ ಪಿ 2)
  • ಉತ್ತರಾಖಾಂಡ – ಒಟ್ಟು 5 (ಬಿಜೆಪಿ 5)
  • ಪಶ್ಚಿಮ ಬಂಗಾಳ – ಒಟ್ಟು 42 (ತೃಣಮೂಲ ಕಾಂಗ್ರೆಸ್ 21, ಬಿಜೆಪಿ 20, ಕಾಂಗ್ರೆಸ್ 1)
  • ಅಂಡಮಾನ್ ನಿಕೋಬಾರ್ – ಒಟ್ಟು ಸ್ಥಾನ 1 (ಬಿಜೆಪಿ 1)
  • ಚಂಡೀಗಢ – ಒಟ್ಟು ಸ್ಥಾನ 1 (ಬಿಜೆಪಿ 1)
  • ದಾದ್ರಾ ನಗರ್ ಹವೇಲಿ, ದಿಯು ಮತ್ತು ದಮನ್ – ಒಟ್ಟು ಸ್ಥಾನ 2 (ಬಿಜೆಪಿ 2)
  • ಜಮ್ಮು ಮತ್ತು ಕಾಶ್ಮೀರ – ಒಟ್ಟು ಸ್ಥಾನ 5 (ಬಿಜೆಪಿ 2, ಜೆಕೆಎನ್ ಸಿ 3)
  • ಲಡಾಕ್ – ಒಟ್ಟು ಸ್ಥಾನ 1 (ಬಿಜೆಪಿ 1)
  • ಲಕ್ಷದ್ವೀಪ – ಒಟ್ಟು ಸ್ಥಾನ 1 (ಕಾಂಗ್ರೆಸ್ 1)
  • ದೆಹಲಿ – ಒಟ್ಟು ಸ್ಥಾನ 7 (ಬಿಜೆಪಿ 7)
  • ಪುದುಚ್ಚೇರಿ – ಒಟ್ಟು ಸ್ಥಾನ 1 (ಬಿಜೆಪಿ 1)

Leave a Reply

Your email address will not be published. Required fields are marked *

error: Content is protected !!