ಉಡುಪಿ: ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ- ಯಶ್ಪಾಲ್ ಸುವರ್ಣ
ಉಡುಪಿ ಮಾ.6(ಉಡುಪಿ ಟೈಮ್ಸ್ ವರದಿ): ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅವರ ಸಹಿತ ಪ್ರತಿಭಟನಾಕಾರರು ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗುಳಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ವಿಫಲವಾಗಿದೆ. ಹಾಗಾಗಿ ಈ ವೈಫಲ್ಯವನ್ನು ಮುಚ್ಚಿ ಹಾಕಲು ಇಂತಹ ಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ ಎಂದು ಟೀಕಿಸಿದರು. ಹಾಗೂ ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ ತರಲಾಗುತ್ತಿದೆ. ವಿಧಾನ ಸೌಧ ಶಕ್ತಿ ಕೇಂದ್ರದ ಒಳಗೆ ಪೊಲೀಸ್ ಭದ್ರತೆ ನಡುವೆ ಅಷ್ಟು ಜನ ಹೇಗೆ ಬಂದರು ಎಂದು ಪ್ರಶ್ನಿಸಿದರು.
ಪಾಕ್ ಪರ ಘೋಷಣೆ ಮಾಡಿಲ್ಲ ಎಂದು ಎಲ್ಲರೂ ಹೇಳಿಕೆ ಕೊಟ್ಟಿದ್ದರು. ಈ ವಿಚಾರದಲ್ಲಿ ಮಾಧ್ಯಮಗಳಿಗೆ ಕಾಂಗ್ರೆಸ್ ನಾಯಕರು ಸವಾಲುಗಳನ್ನು ಕೂಡ ಹಾಕಿದ್ದರು. ಈಗ ಎಫ್.ಎಸ್.ಎಲ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಸಾಭೀತಾಗಿದೆ. ಇಂದು ಪ್ರತಿಭಟನೆ ಮಾಡಿ ವಿರೋಧಿಸಿದವರ ಭಾವಚಿತ್ರಕ್ಕೆ ಉಗಿದಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ನಮಗೆ ಏನಾದರೂ ಸರಕಾರ ತೊಂದರೆ ಕೊಡುತ್ತದೆ ಎಂದು ಕೆಲವರು ಮಾತನಾಡಲು ಮುಂದೆ ಬರುವುದಿಲ್ಲ. ಎಲ್ಲ ಪಕ್ಷ, ಸಂಘ, ಸಂಸ್ಥೆೆಗಳು ರಾಷ್ಟ್ರ ನನ್ನದು ಎಂಬ ಚಿಂತನೆಯಿಂದ ಎಲ್ಲರೂ ಮಾತನಾಡಲೇಬೇಕು. ದೇಶದ್ರೋಹಿಗಳಿಗೆ ಶಿಕ್ಷೆೆಯಾಗಲೇಬೇಕು ಎಂದರು.
ಹಾಗೂ ರಾಜ್ಯ ಸರಕಾರವು ಜನರುಸ್ವಾಭಿಮಾನಿಯಾಗಿ ಬದುಕುವುದನ್ನು ಕಿತ್ತುಕೊಂಡಿದೆ. ಗ್ಯಾರಂಟಿ ಯೋಜನೆಗಳಿಂದ ಜನರು ತಿಂಗಳ ಹಣಕ್ಕೆೆ ಕಾಯುವಂತೆ ಮಾಡುತ್ತಿದ್ದಾರೆ. ರಾಷ್ಟ್ರದ್ರೋಹ ಮಾಡಿದವರನ್ನು ಎಂದಿಗೂ ಕ್ಷಮಿಸಬಾರದು. ದೇಶಕ್ಕಿಂತ ದೊಡ್ಡದು ಯಾವುದು ಇಲ್ಲ. ವಿಧಾನ ಸೌಧದಲ್ಲಿ ಪಾಕ್ಪರ ಘೋಷಣೆ ಕೂಗಿದವರ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಲು ಎಲ್ಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು. ಹಾಗೂ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವರಿಗೆ ಸರಿಯಾದ ಶಿಕ್ಷೆೆ ನೀಡಲು ವಿಳಂಬ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಸೇವ ಕಾರ್ಯಕರ್ತೆ ಸ್ವರ್ಣಾ ಅವರು ಮಾತನಾಡಿ, ಕಾಂಗ್ರೆೆಸ್ನ ದೇಶ ವಿರೋಧಿ ಮಾನಸಿಕತೆಗೆ ರಾಜ್ಯದ ಎರಡು ಪ್ರಮುಖ ಘಟನೆಗಳು ಸಾಕ್ಷಿಯಾಗಿದೆ. ಎರಡು ಘಟನೆಗಳನ್ನು ಎನ್ಐಎ ತನಿಖೆ ನಡೆಸಬೇಕು, ರಾಜ್ಯ ಸರಕಾರದ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಸಮಿತಿಯ ಪ್ರಮುಖ, ಕಾನೂನು ವಿದ್ಯಾರ್ಥಿ ರವಿಚಂದ್ರ, ಬ್ರಹ್ಮಾವರ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ಕಾಪು ಸಹಿತ ನಾನ ಭಾಗದಿಂದ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.