ಬೀಫ್ ರಫ್ತಿನಲ್ಲಿ 2ನೇ ಸ್ಥಾನಕ್ಕೇರಿದ ಭಾರತ!

ಹೊಸದಿಲ್ಲಿ: 2023ರಲ್ಲಿ ಬೀಫ್ ರಫ್ತುದಾರರ ಪೈಕಿ ಭಾರತ ಮತ್ತೊಂದು ಪ್ರಮುಖ ರಫ್ತು ದೇಶವಾಗಿ ಹೊರ ಹೊಮ್ಮಿದ್ದು, ನೀರು ಕೋಣವನ್ನು ರಫ್ತು ಮಾಡುತ್ತಿದೆ. ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿವೆ. ಮೊದಲನೇ ಸ್ಥಾನವನ್ನು ಬ್ರೆಝಿಲ್ ಪಡೆದಿದೆ. ಅತೀ ಹೆಚ್ಚು ಬೀಫ್ ಉತ್ಪಾದನೆಯಲ್ಲಿ ಅಮೆರಿಕಾ ಅಗ್ರ ಕ್ರಮಾಂಕದಲ್ಲಿದ್ದು, ಅದು ಉತ್ಪಾದಿಸುವ ಬಹುತೇಕ ಬೀಫ್ ಅನ್ನು ದೇಶೀಯ ಬಳಕೆಗೇ ಮಾರಾಟ ಮಾಡುತ್ತದೆ ಎಂದು ಖಾಸಗಿ ವೆಬ್‌ಸೈಟ್ ವರದಿ ಮಾಡಿದೆ.

ಪರಿಸರ ಮತ್ತು ಮಾನವ ಹಕ್ಕು ಗುಂಪಾದ ಗ್ಲೋಬಲ್ ವಿಟ್ನೆಸ್ ನಡೆಸಿರುವ ತನಿಖೆಯ ಪ್ರಕಾರ, ಬ್ರೆಝಿಲ್ ನ ಸೆರಾಡೊ ಪ್ರಸ್ಥ ಭೂಮಿಯಲ್ಲಿನ ಅಕ್ರಮ ಅರಣ್ಯ ನಾಶದೊಂದಿಗೆ ವಿಶ್ವದ ಮೂರು ಪ್ರಮುಖ ಬೀಫ್ ಉತ್ಪಾದನಾ ಸಂಸ್ಥೆಗಳು ಸಂಬಂಧ ಹೊಂದಿವೆ ಎಂಬ ಸಂಗತಿ ಬಯಲಾಗಿತ್ತು. ಈ ತನಿಖೆಯಲ್ಲಿ ಜೆಬಿಎಸ್, ಮಿನರ್ವ ಹಾಗೂ ಮಾರ್ಫ್ರಿಗ್ ಸಂಸ್ಥೆಗಳು ಅಕ್ರಮ ಅರಣ್ಯ ನಾಶದಲ್ಲಿ ಭಾಗಿಯಾಗಿವೆ ಎಂದು ಹೇಳಲಾಗಿತ್ತು. ಆದರೆ, ಆ ಎಲ್ಲ ಸಂಸ್ಥೆಗಳೂ ಯಾವುದೇ ಅಕ್ರಮದ ಆರೋಪವನ್ನು ಅಲ್ಲಗಳೆದಿದ್ದವು. ಸೆರಾಡೊದ ಸಣ್ಣ ಪ್ರಮಾಣದ ವಿಸ್ತರಣೆಯಾದ ಮ್ಯಾಟೊ ಗ್ರಾಸೊ ಸ್ಥಿತಿಯ ಬಗ್ಗೆ ಈ ತನಿಖೆಯು ಗಮನ ಹರಿಸಿತ್ತು. ಈ ಮೂರು ಸಂಸ್ಥೆಗಳ ಒಡೆತನದ ಜಾನುವಾರುಗಳಿಗಾಗಿ ನಡೆದಿದ್ದ ಅರಣ್ಯ ನಾಶದ ಸಂದರ್ಭದಲ್ಲಿ ಮರಗಳನ್ನು ಕತ್ತರಿಸಲು ಯಾವುದೇ ಪರವಾನಗಿ ಇರಲಿಲ್ಲ ಹಾಗೂ ಅದು ಅಕ್ರಮವಾಗಿತ್ತು ಎಂಬುದು ಈ ತನಿಖೆಯಲ್ಲಿ ಪತ್ತೆಯಾಗಿತ್ತು.

ಕಿರು ಮತ್ತು ಸಣ್ಣ ವ್ಯವಹಾರಗಳಿಗಾಗಿ ಡಿಸೆಂಬರ್ 30, 2024ರಿಂದ ಜೂನ್ 30, 2025ರವರೆಗೆ ಯೂರೋಪ್ ಒಕ್ಕೂಟದಲ್ಲಿ ಜಾರಿಯಾಗಿರುವ ಯೂರೋಪ್ ಒಕ್ಕೂಟ ಅರಣ್ಯ ನಾಶ ನಿಯಮಗಳು ಕಾನೂನನ್ನು ಪಾಲಿಸುವಂತೆ ಬೀಫ್ ಉತ್ಪಾದನಾ ಸಂಸ್ಥೆಗಳಿಗೆ ನೀಡಿರುವ ಗಡುವಿನ ಬೆನ್ನಿಗೇ ಈ ಸುದ್ದಿಯು ಬಂದಿದೆ. ಯೂರೋಪ್ ಒಕ್ಕೂಟ ಅರಣ್ಯ ನಾಶ ನಿಯಮಗಳ ಪ್ರಕಾರ, ಯೂರೋಪ್ ಒಕ್ಕೂಟಕ್ಕೆ ತಮ್ಮ ಉತ್ಪನ್ನಗ ಳನ್ನು ಮಾರಾಟ ಮಾಡುವ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು 2020ರ ನಂತರ ಅರಣ್ಯ ನಾಶ ಮಾಡಿದ ಜಮೀನಿನಲ್ಲಿ ತಯಾರಿಸಿಲ್ಲ ಎಂದು ಸಾಬೀತು ಪಡಿಸಬೇಕು ಇಲ್ಲವೇ ಭಾರಿ ದಂಡವನ್ನು ತೆರಬೇಕು. ವಿಶ್ಲೇಷಕರ ಪ್ರಕಾರ, ಪಾಲನೆಯಾಗ ಬೇಕಾದ ಸೂಕ್ತ ದತ್ತಾಂಶಗಳನ್ನು ಒದಗಿಸಲು ವಿಫಲವಾಗುವ ಸಣ್ಣ ರೈತರಿಗೆ ಈ ಕಾನೂನು ದಂಡ ವಿಧಿಸುತ್ತದೆ. ಆ ಮೂಲಕ ಅವರ ಪ್ರಮುಖ ಆದಾಯ ಮೂಲಕ್ಕೆ ಕತ್ತರಿ ಹಾಕುತ್ತದೆ.

ಈ ಕಾನೂನಿನಿಂದ ತೊಂದರೆಗೀಡಾಗುವ ಕೆಲವು ಉತ್ಪನ್ನಗಳ ಪೈಕಿ ಬೀಫ್, ಕಾಫಿ, ಪಾಮೊಲಿನ್ ಎಣ್ಣೆ ಹಾಗೂ ಸೋಯಾ ಸೇರಿವೆ. ಆದರೆ, ಗ್ಲೋಬಲ್ ವಿಟ್ನೆಸ್ ಅಭಿಯಾನಗಾರರು ಈ ಕಾನೂನಿನಲ್ಲಿರುವ ಮತ್ತೊಂದು ಸಮಸ್ಯೆಯನ್ನು ಮುಂದು ಮಾಡಿದ್ದು, ಈ ಕ್ರಮಗಳು ಅಮೆಝಾನ್ ಕಾಡುಗಳಂತೆ ಸೆರಾಡೊ ಪ್ರಸ್ಥ ಭೂಮಿಯ ಕಾಡುಗಳಿಗೆ ವಿಧಿಸಲಾಗಿರುವಷ್ಟು ಕಠಿಣವಾಗಿಲ್ಲ ಎಂದು ಅಪಸ್ವರವೆತ್ತಿದ್ದಾರೆ.

ಅಮೆರಿಕಾ ಕೃಷಿ ಇಲಾಖೆಯ ಪ್ರಕಾರ, 2023ರಲ್ಲಿ ಬ್ರೆಝಿಲ್ ಅತಿ ದೊಡ್ಡ ಬೀಫ್ ರಫ್ತುದಾರನಾಗಿರುವು ದನ್ನು ಪಟ್ಟಿಯು ತೋರಿಸುತ್ತಿದೆ. ಮುನ್ನೋಟಗಳ ಪ್ರಕಾರ, ಆ ವರ್ಷದಲ್ಲಿ ಬ್ರೆಝಿಲ್ ದೇಶವು 3 ದಶಲಕ್ಷ ಟನ್ ಗಿಂತ ಹೆಚ್ಚು ಬೀಫನ್ನು ರಫ್ತು ಮಾಡಿದೆ.

Leave a Reply

Your email address will not be published. Required fields are marked *

error: Content is protected !!