ಕುಂದಾಪುರ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್: ಪ್ರತಿಜ್ಞಾ ಸ್ವೀಕಾರ
ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ನರ್ಸಿಂಗ್ ವೃತ್ತಿಗೆ ಪಾದರ್ಪಣೆ ಮಾಡುವ ಮೊದಲ ಹಂತವಾದ ದೀಪ ಬೆಳಗಿಸುವ ಮೂಲಕ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮವನ್ನು ಫೆಬ್ರವರಿ 29 ರಂದು ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ.ಕೆ, ಆಶ್ರಿತ್ ಸ್ಕೂಲ್& ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲರು ಪ್ರೊ.ಮೋಹನ್ ಎಸ್, ಪ್ರೊ| ಫಸಲ್ ರಹಮಾನ್ ಎಂ. ಟಿ, ಮೂಡ್ಲಕಟ್ಟೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಪ್ರೊ| ಜೆನಿಫರ್ ಫ್ರೀಡ ಮಿನೇಜೆಸ್, ಪ್ರಾಂಶುಪಾಲರು ಮೂಡ್ಲ ಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಪ್ರೊ|ರೂಪಾಶ್ರೀ ಕೆ.ಎಸ್ ಉಪಪ್ರಾಂಶುಪಾಲರು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್. ಇವರು ದೀಪ ಬೆಳಗಿಸುವಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಫ್ರೀಡಾ ಮಿನೇಜಸ್ ರವರು ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಜ್ಞಾ ಸ್ವೀಕಾರ ವಿಧಾನವನ್ನು ವಾಚಿಸುವ ಮೂಲಕ, ಅವರಿಗೆ ಸೇವೆ ಸಲ್ಲಿಸುವ ಸಲುವಾಗಿ ಜ್ಞಾನ, ಪ್ರೀತಿ, ಬದ್ಧತೆ, ಸಹಾನುಭೂತಿ, ಸಮರ್ಪಣೆ ಮತ್ತು ಶಿಸ್ತಿನ ಬೆಳಕನ್ನು ಬೆಳಗಿಸಿದರು.
ಮುಖ್ಯ ಅತಿಥಿ ಡಾ.ಪ್ರೇಮಾನಂದಕೆ ರವರು “ದಾದಿಯರು ಸೇವೆ ಸಲ್ಲಿಸುವಾಗ ರೋಗಿಯ ಹಕ್ಕನ್ನು ಕಾಪಾಡುವುದರ ಜೊತೆಗೆ ಗೌಪ್ಯತೆಯನ್ನು ಪಾಲನೆ ಮಾಡಬೇಕು. ನಾವು ಮೊದಲು ನಮ್ಮ ವಿದ್ಯಾಭ್ಯಾಸದ ಬುಡವನ್ನು ಗಟ್ಟಿಗೊಳಿಸಿ ತಮ್ಮ ಶ್ರದ್ಧೆ, ಸೇವಾ ಮನೋಭಾವದ ಮನಸ್ಥಿಯನ್ನು ಹೆಮ್ಮರವಾಗಿ ಬೆಳೆಸುವ ಮೂಲಕ ಇತರರಿಗೆ ಮಾರ್ಗದರ್ಶಿಯಾಗ ಬೇಕು” ಎಂದು ತಿಳಿಸಿದರು.
ಪ್ರೊ| ಮೋಹನ್ ಎಸ್ ರವರು ಫ್ಲಾರೆನ್ಸ್ ನೈಟಿಂಗೇಲ್ ಸಾಗಿ ಬಂದ ಹಾದಿಯ ಕುರಿತು ಹಾಗೂ ದಿನದ ಮಹತ್ವದ ಬಗ್ಗೆ ತಿಳಿಸಿದರು.
ಉಪ್ರಾಂಶುಪಾಲೆಯಾದ ಪ್ರೊ|ರೂಪಾಶ್ರೀ ಕೆ ಎಸ್ ರವರು ಸ್ವಾಗತ ಕೋರಿದರು. ಸಹಾಯಕ ಉಪನ್ಯಾಸಕಿ ರಕ್ಷಿತಾ ಧನ್ಯವಾದವನ್ನು ಸಮರ್ಪಿಸಿದರು. ಸಹಾಯಕ ಪ್ರಾಧ್ಯಾಪಕಿ ವೆಲ್ಮೇರಾ ಡಯಾಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.