ಸರ್ಕಾರ ಬೀಳಿಸಲು ಬಿಜೆಪಿ ಯತ್ನ: ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ.ಆಮೀಷ- ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು: ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಒಬ್ಬೊಬ್ಬರಿಗೆ 50 ಕೋಟಿ ರು. ಆಫರ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, ಬಿಜೆಪಿಯವರ ಆಮಿಷಕ್ಕೆ ಕಾಂಗ್ರೆಸ್ ಶಾಸಕರಾರೂ ಬಗ್ಗಿಲ್ಲ. ನಾವು ಬಹುಮತ ಪಡೆದಿದ್ದರೂ ಸರ್ಕಾರ ಅಲುಗಾಡಿಸಲು ಬಿಜೆಪಿ ಪ್ರಯತ್ನಪಡುತ್ತಿದೆ ಎಂದು ದೂರಿದರು.

ಬಿಜೆಪಿಯವರಿಗೆ ಸರ್ಕಾರಗಳನ್ನು ಬೀಳಿಸುವುದು ಅಭ್ಯಾಸವಾಗಿ ಹೋಗಿದೆ. ಅವರು ರಾಜ್ಯದಲ್ಲಿ ನೇರವಾಗಿ ಯಾವತ್ತೂ ಅಧಿಕಾರಕ್ಕೆ ಬಂದೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳಲ್ಲಿ ಸರ್ಕಾರ ಅತಂತ್ರಗೊಳಿಸುತ್ತಿರುವಂತೆ ಕರ್ನಾಟಕದಲ್ಲೂ ನಡೆದಿರುವುದು ಸತ್ಯ’ ಎಂದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ 136 ಸ್ಥಾನಗಳ ಬಲವಿದೆ. ಆದರೂ ಬಿಜೆಪಿಯು ರಾಜ್ಯ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದೆ. ಬಿಜೆಪಿ ನಾಯಕರಿಗೆ ಸರ್ಕಾರಗಳನ್ನು ಬೀಳಿಸುವುದು ಒಂದು ಅಭ್ಯಾಸವಾಗಿದೆ. ಇವರು ಯಾವತ್ತೂ ಕೂಡ ನೇರವಾಗಿ ಚುನಾವಣೆ ಎದುರಿಸಿಲ್ಲ. ದೇಶದ ವಿವಿಧ ಕಡೆಗಳಲ್ಲಿ ಸರ್ಕಾರಗಳನ್ನು ಅತಂತ್ರ ಮಾಡಿರುವಂತೆಯೇ, ಕರ್ನಾಟಕ ರಾಜ್ಯದಲ್ಲೂ ಸರ್ಕಾರ ಬೀಳಿಸಿರುವ ಯತ್ನ ನಡೆದಿರುವುದು ನಿಜ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಕೇವಲ 5% ಜನಸಂಖ್ಯೆ ಮಾತ್ರ ಬಡವರಿದ್ದಾರೆ ಎಂದು ನೀತಿ ಆಯೋಗದ ಹೇಳಿಕೆಯ ಬಗ್ಗೆ ಮಾತನಾಡಿದ ಅವರು ಇದು ನಿಜವೋ ಸುಳ್ಳೋ ಎಂದು ತಿಳಿಯಲು ವರದಿಯನ್ನು ಪರಿಶೀಲಿಸಬೇಕು ಎಂದು ಹೇಳಿದರು. ದೇಶದಲ್ಲಿ ಬಡತನ ಕಡಿಮೆಯಾ ದರೆ ಒಳ್ಳೆಯದು.

ಆದರೆ ಜನರು ಮತ್ತು ಅವರ ಜೀವನಮಟ್ಟವನ್ನು ನೋಡಿದರೆ ಅದು ಈ ಮಟ್ಟಕ್ಕೆ ಇಳಿದಿದೆ ಎಂದು ನಾನು ಭಾವಿಸುವುದಿಲ್ಲ. ದೇಶದಲ್ಲಿ ಬಡತನ ಕಡಿಮೆಯಾದರೆ 88 ಲಕ್ಷ ಬಿಪಿಎಲ್ ಕುಟುಂಬಗಳು ಹೇಗೆ ಇರುತ್ತವೆ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!