ಬಿಜೆಪಿ ಕೊಳಕು ಘಟಕದಿಂದ ವಿವಾದ ಸೃಷ್ಠಿ- ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ರಾಜ್ಯಸಭಾ ಸಂಸದ ನಾಸೀರ್

ಬೆಂಗಳೂರು: ‘ಪಾಕಿಸ್ತಾನ ಪರ’ ಘೋಷಣೆ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಅನ್ನು ಪ್ರತಿಪಕ್ಷ ಬಿಜೆಪಿ ತರಾಟೆಗೆ ತೆಗೆದುಕೊಂಡಿದ್ದು, ಈ ನಡುವಲ್ಲೇ ಕಾಂಗ್ರೆಸ್ ರಾಜ್ಯಸಭಾ ಸಂಸದ ಸೈಯದ್ ನಸೀರ್ ಹುಸೇನ್ ಅವರು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ಬಿಜೆಪಿಯ ಕೊಳಕು ಘಟಕ ವಿವಾದ ಹುಟ್ಟುಹಾಕಿದೆ. ಇವೆಲ್ಲವೂ ಸುಳ್ಳು ಹಾಗೂ ಕಾಲ್ಪನಿಕ ಎಂದು ಹೇಳಿದ್ದಾರೆ. ನಾನು ಸ್ಥಳದಲ್ಲಿದ್ದಾಗ ಯಾರೊಬ್ಬರಿಗೂ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳಿಸಿರಲಿಲ್ಲ. ವಿಜಯದ ಸಂಭ್ರಮದ ಬಳಿಕ ನಾನು ಹೆಚ್ಚಿನ ಸಂಖ್ಯೆಯ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾದೆ. ಸುಮಾರು 100 ಜನರು ಮತ್ತು 15 ಕ್ಕೂ ಹೆಚ್ಚು ಪತ್ರಕರ್ತರು ನನಗೆ ಒಂದೊಂದಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಯಾರೊಬ್ಬರಿಗೂ ಪಾಕಿಸ್ತಾನದ ಪರ ಘೋಷಣೆಗಳು ಕೇಳಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಪಿತೂರಿ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!