ಪಾಕಿಸ್ತಾನ ಬಿಜೆಪಿಗೆ ಶತ್ರುದೇಶ, ನಮಗಲ್ಲ- ಬಿಕೆ ಹರಿಪ್ರಸಾದ್
ಬೆಂಗಳೂರು: ಬಿಜೆಪಿಗೆ ಪಾಕಿಸ್ತಾನವು “ಶತ್ರು ದೇಶ” ಆಗಿರಬಹುದು, ಆದರೆ ಕಾಂಗ್ರೆಸ್ ಅದನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ರಾಜ್ಯ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಕಪಾಲದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲಿನ ಚರ್ಚೆಯ ವೇಳೆ ಮಾತನಾಡಿರುವ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ವಿಜಯಶಾಲಿ ಎಂದು ಘೋಷಿಸಿದ ನಂತರ ವಿಧಾನಸೌಧದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಬ್ಬ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದ. ಈ ಸಂಬಂಧ ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಬುಧವಾರ ಉಭಯ ಸದನಗಳಲ್ಲಿ ಗದ್ದಲ ಸೃಷ್ಟಿಸಿತು.
ಪರಿಷತ್ತಿನಲ್ಲಿ ನಡೆದ ಚರ್ಚೆಯ ವೇಳೆ ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶತ್ರು ದೇಶ ಎಂದರೆ ನಿಮ್ಮ ಪ್ರಕಾರ ಅದು ಪಾಕಿಸ್ತಾನ. ಆದರೆ, ನಮಗೆ ಅದು ಶತ್ರು ದೇಶವಲ್ಲ, ನೆರೆಯ ದೇಶ ಮಾತ್ರ. ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್ಕೆ ಆಡ್ವಾಣಿಗೆ ಭಾರತ ರತ್ನ ನೀಡಿ ಗೌರವಿಸಿತು. ಆದರೆ, ಅವರು ಪಾಕಿಸ್ತಾನದ ಲಾಹೋರ್ ನಲ್ಲಿರುವ ಜಿಲ್ಲಾ ಸಮಾಧಿಗೆ ಭೇಟಿ ನೀಡಿ, ಅವರಷ್ಟು ಜಾತ್ಯಾತೀತ ನಾಯಕ ಯಾರೂ ಇಲ್ಲ ಎಂದಿದ್ದರು. ಆಗ ಬಿಜೆಪಿಗರಿಗೆ ಪಾಕಿಸ್ತಾನ ಶತ್ರು ದೇಶವಾಗಿರಲಿಲ್ಲವೇ?…ಕಾಂಗ್ರೆಸ್ ಭಾರತದ ವಿರುದ್ಧ 4 ಬಾರಿ ಯುದ್ಧ ಮಾಡಿದ ನಂತರವೂ ಪಾಕಿಸ್ತಾನವನ್ನು “ಶತ್ರು ರಾಷ್ಟ್ರ” ಎಂದು ಕಾಂಗ್ರೆಸ್ ಕರೆಯೋದಿಲ್ಲ ಎಂದು ಹೇಳಿದರು.
ಈ ಹೇಳಿಕೆ ಬೆನ್ನಲ್ಲೇ ಹಲವಾರು ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಹರಿಪ್ರಸಾದ್ ಅವರ ಹೇಳಿಕೆ ಕಾಂಗ್ರೆಸ್ ಪಾಕಿಸ್ತಾನದ ಬಗ್ಗೆ ಮೃದುತ್ವವನ್ನು ತೋರಿಸುತ್ತಿರುವುದು ಸಾಬೀತುಪಡಿಸುತ್ತಿದೆ ಎಂದರು ಹೇಳಿದರು.