ಮೋದಿ ಗೆಲ್ಲಿಸಿ ಭಾರತ ಉಳಿಸಿ ಶ್ರೀರಾಮ ಸೇನೆಯಿಂದ ಅಭಿಯಾನ
ಉಡುಪಿ: ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಮಾರ್ಚ್ ಕೊನೆಯಲ್ಲಿ ಉಡುಪಿಯಲ್ಲಿ ನಡೆಯಲಿರುವ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನದ ಪೂರ್ವಭಾವಿ ಸಭೆಯು ಸೋಮವಾರ ಮಥುರಾ ಕಂಪರ್ಟ್ಸ್ ಸಭಾಂಗಣದಲ್ಲಿ ನಡೆಯಿತು. ಶ್ರೀರಾಮಸೇನೆಯ ರಾಜ್ಯ ಪ್ರ ಕಾರ್ಯದರ್ಶಿ ಆನಂದ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಾಧ್ಯಕ್ಷರಾದ ಗಂಗಾಧರ್ ಕುಲಕರ್ಣಿ ವಿವರವನ್ನು ನೀಡಿದರು.
ದೇಶ ಮೊದಲು ಎಂಬ ಸಂಘಟನೆಯ ದ್ಯೇಯದಂತೆ ನಡೆಯುವ ಈ ಕಾರ್ಯಕ್ರಮದ ರೂಪು ರೇಷೆಯ ಬಗ್ಗೆ ಚರ್ಚಿಸಿ ಸಾಧು ಸಂತರು, ಮೋದಿ ಅಭಿಮಾನಿಗಳು, ವಿವಿಧ ಸಂಘಟನೆ, ಹಾಗೂ ಜನಪ್ರತಿನಿದಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗುವುದೆಂದು ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ತಿಳಿಸಿದರು. ಈ ಸಂಧರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ರಾಜ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿಯವರನ್ನು ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಗೌರವಿಸಲಾಯಿತು. ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ ಈ ಕಾರ್ಯಕ್ರಮವನ್ನು ಜಿಲ್ಲಾ ಪ್ರ ಕಾರ್ಯದರ್ಶಿ ಸುಧರ್ಶನ್ ಪೂಜಾರಿ ನಿರೂಪಿಸಿದರು.