ಬಂಟಕಲ್: “ಬೇಸಿಕ್ ಲೈಫ್ ಸಪೋರ್ಟ್& ಏರ್ ವೇ ಮ್ಯಾನೇಜ್ ಮೆಂಟ್” ಕಾರ್ಯಾಗಾರ
ಉಡುಪಿ: ಶ್ರೀಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್ ಹಾಗೂ ಡೆಲ್ಟಾ ಹೆಲ್ತ್ ಕೇರ್ ನ ಆಶ್ರಯದಲ್ಲಿ ಬೇಸಿಕ್ ಲೈಫ್ ಸಪೋರ್ಟ್ ಹಾಗೂ ಏರ್ ವೇ ಮ್ಯಾನೇಜ್ ಮೇಂಟ್ ನ ಬಗ್ಗೆ ಮಾಹಿತಿ ಕಾರ್ಯಾಗಾರ ಫೆ.21ರಂದು ನಡೆಯಿತು.
ಎಸ್.ಎಂ.ವಿ.ಐ.ಟಿ.ಎಂ ಬಂಟಕಲ್ನ ಪ್ರಾಂಶುಪಾಲರಾದ ತಿರುಮಲೇಶ್ವರ ಭಟ್ ರವರು ಮುಖ್ಯ ಅತಿಥಿಯಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ, ಜೀವ ರಕ್ಷಣೆಯ ಬಗೆಗಿನ ಕಾರ್ಯಾಗಾರಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಅತಿಥಿಗಳಾದ ಡಾ.ನವೀನ್ ಎಂ.ಬಲ್ಲಾಳ್ ರವರು ಬೇಸಿಕ್ ಲೈಫ್ ಸಪೋರ್ಟ್ನ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಡೆಲ್ಟಾ ಹೆಲ್ತ್ ಕೇರ್ ನ ಬೋಧಕರಾದ ರಾಹುಲ್ ಬಿಸ್ಟ್ ರವರು “ಬೇಸಿಕ್ ಲೈಫ್ ಸಪೋರ್ಟ್ ಹಾಗೂ ಏರ್ ವೇ ಮ್ಯಾನೇಜ್ ಮೇಂಟ್” ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸಿ. ಆರ್.ಭರತ್ ನಾರಾಯಣನ್ ರವರು ಮೆಡಿಕಲ್ ಸಿಮ್ಯೂಲೇಟರ್ ನ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್, ಉಡುಪಿ ಕಾಲೇಜ್ ಆಫ್ ನರ್ಸಿಂಗ್, ವಿದ್ಯಾ ಕಾಲೇಜ್ ಆಫ್ ನರ್ಸಿಂಗ್, ಆದರ್ಶ ಇನ್ಸ್ಟಿಟ್ಯೂಟ್ ಆಫ಼್ ಅಲೈಡ್ ಹೆಲ್ತ್ ಸೈನ್ಸಸ್ , ವಿದ್ಯಾರತ್ನ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್ ಹಾಗೂ ಎಸ್.ಎಂ.ವಿ.ಐ.ಟಿ.ಎಂ. ನ ಎಂ.ಬಿ.ಎ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ನಿರಾಮಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಫ಼್ಲಾವಿಯ ಕ್ಯಾಸ್ಟಲೀನೊ ಸ್ವಾಗತಿಸಿ, ರೋಶನಿ ರೋಡ್ರಿಗಸ್ ಕಾರ್ಯಾಗಾರದ ಬಗ್ಗೆ ಅವಲೋಕಿಸಿದರು. ಶಿವಶಂಕರ್ ಪೈ ಧನ್ಯವಾದ ಅರ್ಪಿಸಿದರು. ಜೆನಿಫರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.