ಉಡುಪಿ: ಕೆಡಿಪಿಗೆ ಐವರ ನಾಮ ನಿರ್ದೇಶನ
ಉಡುಪಿ, ಫೆ. 23: ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಐದು ಮಂದಿಯನ್ನು ನಾಮ ನಿರ್ದೇಶನ ಮಾಡಿ ಜಿಪಂ ಸಿಇಒ ಪ್ರತೀಕ್ ಬಯಾಲ್ ಆದೇಶ ಹೊರಡಿಸಿದ್ದಾರೆ.
ಕೆರಾಡಿ ಪ್ರಸನ್ನಕುಮಾರ್ ಶೆಟ್ಟಿ ಕದಿಕೆ ಬಡಾ ನಿಡಿಯೂರಿನ ಜಯ ಕುಮಾರ್, ಹರಿಕುದ್ರು ಆನಗಳ್ಳಿಯ ಗಂಗಾಧರ ಶೆಟ್ಟಿ, ಕಾಪು ಮೂಡುಬೆಳ್ಳೆಯ ಐಡಾಗಿಬ್ಬಾಡಿ’ಸೋಜಾ ಹಾಗೂ ಕಾರ್ಕಳ ರೇಂಜಾಳದ ವೀಣಾ ಶೆಟ್ಟಿಯವರನ್ನು ಅಧಿಕಾರೇತರ ಸದಸ್ಯರನ್ನಾಗಿ ಕೆಡಿಪಿಗೆ ನಾಮ ನಿರ್ದೇಶನ ಮಾಡಲಾಗಿದೆ.