ಉಡುಪಿ: ಫೆ.24 ರಂದು ಲಯನ್ಸ್ ಪ್ರಾಂತ್ಯ ಸಮ್ಮೇಳನ ‘ಸ್ನೇಹ ಸಿಂಚನ-2024’

ಉಡುಪಿ: ಲಯನ್ಸ್ ಜಿಲ್ಲೆ 317 ಸಿಯ ಪ್ರಾಂತ್ಯ 2ರ ಪ್ರಾಂತ್ಯ ಸಮ್ಮೇಳನ ‘ಸ್ನೇಹ ಸಿಂಚನ-2024’ ಫೆ.24ರ ಶನಿವಾರ ಸಂಜೆ ಪರ್ಕಳ ಸಮೀಪದ ಹೆರ್ಗ ಗಾರ್ಡನ್ ನಲ್ಲಿ ನಡೆಯಲಿದೆ.

ಸಮ್ಮೇಳನದಲ್ಲಿ ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಷ ಶೆಟ್ಟಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಲಯನ್ಸ್ ಜಿಲ್ಲೆ 317 ಡಿಯ ನಿಕಟಪೂರ್ವ ರಾಜ್ಯಪಾಲ ಸಂಜೀತ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು. ಪ್ರಾಂತ್ಯಾಧ್ಯಕ್ಷ ವರ್ವಾಡಿ ಪ್ರಸಾದ್ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಪ್ರಾಂತ್ಯದ ಪ್ರಥಮ ಮಹಿಳೆ ನಿರುಪಮಾ ಪ್ರಸಾದ್ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಈ ಸಮ್ಮೇಳನದಲ್ಲಿ ಲಯನ್ಸ್ ಜಿಲ್ಲಾ ಹಿರಿಯ ಮಾಜಿ ರಾಜ್ಯಪಾಲ ಡಾ.ಎ. ರವೀಂದ್ರನಾಥ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.

ಪ್ರಥಮ ಉಪ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಪ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಶುಭಾಶಂಸನೆಗೈಯಲಿರುವರು. ಈ ಸಮ್ಮೇಳನದ ಅಂಗವಾಗಿ ಸರಕಾರಿ ಬಾಕಿಯರ ಪದವಿ ಪೂರ್ವ ಕಾಲೇಜಿಗೆ ರೂ. 2.5 ಲಕ್ಷ ವೆಚ್ಚದಲ್ಲಿ ನೀರಿನ ತೊಟ್ಟಿಯನ್ನು (sump) ಕೊಡುಗೆಯಾಗಿ ನೀಡುತ್ತಿದ್ದು, ಅದನ್ನು ಶಾಸಕ ಯಶ್ಪಾಲ್ ಸುವರ್ಣ ಶನಿವಾರ ಬೆಳಿಗ್ಗೆ 10.30 ಕ್ಕೆ ಉದ್ಘಾಟಿಸಲಿದ್ದು, ಲಯನ್ಸ್ ಜಿಲ್ಲಾ ಗವರ್ನರ್ ನೇರಿ ಕರ್ನೇಲಿಯೋ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಸಂಜೆ ನಡೆಯುವ ಸಮ್ಮೇಳನದಲ್ಲಿ ಅಂಗವಿಕಲ ಮಹಿಳೆಗೆ ವ್ಹೀಲ್ ಚೇರ್, ವಿದ್ಯಾರ್ಥಿಗೆ ಲ್ಯಾಪ್ ಟಾಪ್, ಕ್ಯಾನ್ಸರ್ ರೋಗಿ ಹಾಗೂ ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಆರ್ಥಿಕ ನೆರವು ಹಾಗೂ ಮಹಿಳೆಯೋರ್ವರಿಗೆ ಬಾವಿ ತೋಡಲು ಹಣಕಾಸಿನ ಸಹಾಯ ನೀಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಎಸ್. ರಾಜಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!