ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿವಾಸದ ಮೇಲೆ ಸಿಬಿಐ ದಾಳಿ

ಹೊಸದಿಲ್ಲಿ: ಕಿರು ಜಲ ವಿದ್ಯುತ್ ಯೋಜನೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿವಾಸಗಳು ಹಾಗೂ ಇನ್ನಿತರ 29 ಸ್ಥಳಗಳಲ್ಲಿ ಗುರುವಾರ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 100 ಅಧಿಕಾರಿಗಳನ್ನೊಳಗೊಂಡ ತಂಡವು ಗುರುವಾರ ಬೆಳಗ್ಗೆ ವಿವಿಧ ನಗರಗಳಲ್ಲಿನ 30 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣವು ರೂ. 2,200 ಕೋಟಿ ಮೌಲ್ಯದ ಕಿರು ಜಲ ವಿದ್ಯುತ್ ಯೋಜನೆಯ ಕಾಮಗಾರಿಗಳ ಗುತ್ತಿಗೆ ನೀಡುವಾಗ ಭ್ರಷ್ಟಾಷಾರ ನಡೆದಿದೆ ಎಂಬ ಆರೋಪ ಕುರಿತದ್ದಾಗಿದೆ.”

Leave a Reply

Your email address will not be published. Required fields are marked *

error: Content is protected !!