ಮಲ್ಪೆ: ಹಣ ಹೂಡಿಕೆ ಹೆಸರಿನಲ್ಲಿ 14.30ಲಕ್ಷ ರೂ. ವಂಚನೆ
ಮಲ್ಪೆ: ಹಣ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ರಾತುಲ್ ಮುಂತಾಜಿ(29) ಎಂಬವರಿಗೆ ಡಿ.10 ರಂದು ವಾಟ್ಸಾಪ್ ಗ್ರೂಪಿನಲ್ಲಿ ಸ್ಟಾಕ್ ಮಾರ್ಕೇಟಿಂಗ್ ಬಗ್ಗೆ ತಿಳಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೆಪಿಸಿದ್ದು, ವೆಬ್‌ಸೈಟ್ ಮೂಲಕ ಐಡಿಯನ್ನು ಕ್ರಿಯೇಟ್ ಮಾಡಿ ಹಣ ಹೂಡಿಕೆ ಮಾಡಲು ತಿಳಿಸಿದಂತೆ ಸಿದ್ರಾತುಲ್ ಜ.10ರಿಂದ ಜ.25ರವರೆಗೆ ಒಟ್ಟು 15,90,000ರೂ. ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಹಣದಲ್ಲಿ 1,20,000ರೂ. ಹಣವನ್ನು ವಾಪಾಸ್ಸು ತೆಗೆದು ಕೊಂಡಿದ್ದು, ಬಳಿಕ ಹೂಡಿಕೆ ಮಾಡಿದ 14,30,000 ರೂ. ಹಣದ ಲಾಭಾಂಶವನ್ನು ಕೊಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.