ಕಾರ್ಕಳ: 4 ಗಂಟೆಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಮಂಜೂರು ಗೊಳಿಸಿದ ತಹಶೀಲ್ದಾರ್

ಕಾರ್ಕಳ: ಸರಕಾರದ ಸವಲತ್ತುಗಳನ್ನು ಪಡೆಯಲು ಸರಕಾರದ ಕಛೇರಿಗಳಲ್ಲಿ  ಫಲಾನುಭವಿಗಳು  ಅಲೆಯಬೇಕಾದ ಸ್ಥಿತಿ ಇರುವ ಇಂದಿನ ಕಾಲದಲ್ಲಿ ಫಲಾನುಭವಿಯನ್ನು ಗುರುತಿಸಿ ಕೇವಲ 4ಘಂಟೆಗಳಲ್ಲಿ ಪರಿಹಾರ ಸೂಚಿಸಿದ ವಿದ್ಯಮಾನವು ಕಾರ್ಕಳ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.

ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಲು ಬಂದ ವೃದ್ದೆ ಯೋರ್ವರ  ಸಮಸ್ಯೆಯನ್ನು ಆಲಿಸಿ, ವೃದ್ದಾಪ್ಯ ವೇತನವನ್ನು ಕೇವಲ ನಾಲ್ಕು ಘಂಟೆಗಳಲ್ಲಿ ಕಲ್ಪಿಸಿಕೊಟ್ಟಿದ್ದಾರೆ.

ಕಾರ್ಕಳ ತಹಶಿಲ್ದಾರ್ ನರಸಪ್ಪ ಕಛೇರಿಗೆ ಆಗಮಿಸುವ ವೇಳೆ ಶೀಲಾರವರ ಸಮಸ್ಯೆ ಆಲಿಸಿದರು. ಶೀಲಾ  ಮಲೆಕುಡಿಯ 70 ವರ್ಷ ಪ್ರಾಯದ ವೃದ್ದೆ.
ಕಾರ್ಕಳ ತಾಲೂಕಿನ ಕೆರುವಾಶೆಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತಿದ್ದಾರೆ. ಒಬ್ಬಂಟಿಯಾಗಿದ್ದು     ಸರಕಾರದ ಯಾವುದೇ ಯೋಜನೆಯ ಫಲಾನುಭವಿಯಲ್ಲ. ರೇಷನ್ ಕಾರ್ಡ್ ಇದ್ದರು,‌ ಗೃಹಲಕ್ಷ್ಮಿ ಸೇರಿದಂತೆ ಯಾವ ಸವಲತ್ತುಗಳು ಸಿಕ್ಕಿಲ್ಲ. ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇದನ್ನರಿತ ತಹಶಿಲ್ದಾರ್ ನರಸಪ್ಪ ಅವರು ತಕ್ಷಣಕ್ಕೆ ಅಜೆಕಾರಿನ ನಾಡ ಕಛೇರಿ ಉಪತಹಶಿಲ್ದಾರ್ ವೃದ್ದಾಪ್ಯ ವೇತನವನ್ನು ಮಂಜೂರು ಮಾಡಬೇಕೆಂದು ಅಜೆಕಾರು ಉಪತಹಶಿಲ್ದಾರ್‌ಗೆ ಆದೇಶ ಹೊರಡಿಸಿದರು.

ಉಪತಹಶಿಲ್ದಾರ್ ನೇತೃತ್ವ: ಅಜೆಕಾರು ನಾಡಕಚೇರಿಯ ಉಪತಹಶಿಲ್ದಾರ್ ನಮಿತಾ ಬಿ ಅರ್ಜಿಯನ್ನು ಸಲ್ಲಿಸಿ, ಅವರ ನೇತೃತ್ವದಲ್ಲಿ ಶಿರ್ಲಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಫಲಾನುಭವಿ ಶೀಲಾವರ ಖಾತೆ ತೆರೆಸಿ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಅನುಷಾ ಅವರಿಂದ ವಯಸ್ಸಿನ ದೃಢಪ್ರತಿ ಪಡೆದು ಕೆರುವಾಶೆ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಾಟೀಲ್ ಕಂದಾಯ ನಿರೀಕ್ಷ ಮೊಹಮ್ಮದ್ ರಿಯಾಜ್ ಸಂಬಂಧಿತ ಎಲ್ಲಾ ವರದಿಗಳನ್ನು ತರಿಸಿ ಉಪತಹಶಿಲ್ದಾರ್ ತಾಲೂಕು ತಹಶಿಲ್ದಾರ್ ಗೆ ಹಸ್ತಾಂತರಿಸಿದರು.

ಕಾರ್ಕಳ ತಹಶಿಲ್ದಾರ್ ನರಸಪ್ಪ ಅವರು ಸಂಧ್ಯಾ ಸುರಕ್ಷಾ ಯೋಜನೆಯನ್ನು ಮಂಜೂರುಗೊಳಿಸಿ  ಮಂಜುರಾತಿ ಪತ್ರವನ್ನು ಶೀಲರವರಿಗೆ   ಹಸ್ತಾಂತರಿಸಿದರು.

ಶೀಲರವರ ಸುಮಾರು 22 ವರ್ಷಗಳಿಂದ ಖಾತೆ ಬದಲಾವಣೆಯಾಗಿರದ ಪಹಣಿಯನ್ನು ಬದಲಾಯಿಸುವ ಬಗ್ಗೆ ಭರವಸೆ ನೀಡಿ, ಸಂಬಂಧಿತ ಇಲಾಖೆಗೆ ಮಾಹಿತಿ ನೀಡಿದರು.

ನರಸಪ್ಪ ತಹಶಿಲ್ದಾರ್ ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಸಾಲಗುಂದ ಗ್ರಾಮದವರು.
ಕಾರ್ಕಳ ತಹಶಿಲ್ದಾರ್ 13 ವರ್ಷಗಳ ಕಾಲ ಶಿಕ್ಷಕರಾಗಿ, ಬಳಿಕ ಕೆ ಎ ಎಸ್ ಪರೀಕ್ಷೆ ಬರೆದು ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಕಾರ್ಕಳ ತಹಶಿಲ್ದಾರ್ ಆಗಿ ನಿಯೋಜನೆ ಗೊಂಡವರು.

ಸೇವೆ ಒದಗಿಸುವಲ್ಲಿ ಕರ್ನಾಟಕ ಬ್ಯಾಂಕ್  ಸಿಬ್ಬಂದಿಗಳಾದ ಗಾಯತ್ರಿ ಶೆಣೈ, ಮುಖ್ಯ ಪ್ರಬಂಧಕ ಉದಯ ಶಂಕರ್, ಅಜೆಕಾರು ನೆಮ್ಮದಿ ಕೇಂದ್ರದ ಸುರೇಂದ್ರ ನಾಯ್ಕ್, ಭೋಜೆಗೌಡ ಸಹಕಾರ ನೀಡಿದ್ದಾರೆ.

ಸರಕಾರ ನೀಡುವ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಸರಕಾರದ ನೀಡುವ ಎಲ್ಲಾ ಸೇವೆಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು:- ನರಸಪ್ಪ ತಹಶಿಲ್ದಾರ್ ಕಾರ್ಕಳ.

ವೃದ್ಧಪ್ಯ ವೇತನ ಯೋಜನೆ ನನಗೆ ನೀಡಿರುವುದು ಖುಷಿ ತಂದಿದೆ. ಬದುಕಿಗೆ ಭದ್ರತೆ ನೀಡುತ್ತದೆ:- ಶೀಲಾ ವೃದ್ಧಾಪ್ಯ ವೇತನ ಪಡೆದ ಫಲಾನುಭವಿ

Leave a Reply

Your email address will not be published. Required fields are marked *

error: Content is protected !!