ಕಡೆಕಾರ್: “ಸ್ವಚ್ಛತಾ ನಡಿಗೆ” ಜನಜಾಗೃತಿ ಜಾಥ ಕಾರ್ಯಕ್ರಮ
ಉಡುಪಿ ಫೆ.18(ಉಡುಪಿ ಟೈಮ್ಸ್ ವರದಿ):ಚೈತನ್ಯ ವೆಲ್ಫೇರ್ ಫೌಂಡೇಶನ್ ಕಡೆಕಾರ್ ಮತ್ತು ಕಡೆಕಾರ್ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ “ಸ್ವಚ್ಛತಾ ನಡಿಗೆ” ಸ್ವಚ್ಛತೆ ಬಗ್ಗೆ ಜನಜಾಗೃತಿ ಜಾಥ ಕಾರ್ಯಕ್ರಮ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ನಡೆಯಿತು.
ಪಂಚಾಯತ್ ಅಧ್ಯಕ್ಷ ಜಯಕರ್ ಶೇರಿಗಾರ್ ಅವರು ಜಾತಕ್ಕೆ ಚಾಲನೆ ನೀಡಿ ಸ್ವಚ್ಛತೆಯ ನಡಿಗೆ ನಿರಂತರ ವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ಪ್ರರ್ತಕ ಸುನೀಲ್ ಸಾಲ್ಯಾನ್ ಅವರು ಮಾತನಾಡಿ, ಸ್ವಚ್ಛತೆ ಎನ್ನುವುದು ಮನಸ್ಥಿತಿ. ಸರಕಾರದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸಾರ್ವಜನಿಕರು ಸೇರಿಕೊಂಡಾಗ ಆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿವಾಕರ ಕುಂದರ್ ಅವರು ಮಾತನಾಡಿ ಸ್ವಚ್ಛತೆ ಕಡೆಗೆ ನಾವೆಲ್ಲಾ ಮುತುವರ್ಜಿ ವಹಿಸುವುದು ತುಂಬಾ ಅಗತ್ಯವಾಗಿದೆ. ಸ್ವಚ್ಛತೆ ಕಡೆಗೆ ನಮ್ಮ ನಡಿಗೆ ಎಂಬುದು ಅತ್ಯಂತ ಉತ್ತಮ ಕಾರ್ಯಕ್ರಮ ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಸಾಫಲ್ಯ ಟ್ರಸ್ಟ್ ಪ್ರವರ್ತಕರಾದ ನಿರುಪಮಾ ಪ್ರಸಾದ್ ಶೆಟ್ಟಿ ಅವರು ಮಾತನಾಡಿ, ನಮ್ಮ ಮನಸ್ಸು, ಮನೆ ಸ್ವಚ್ಛತೆ ಮಾಡುವ ಜೊತೆಗೆ ನಮ್ಮ ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡುವ ಈ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಡೆಕರ್ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಕರ ಶೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ ಎಸ್, ಮಾಜಿ ಅಧ್ಯಕ್ಷ ರಘುನಾಥ್ ಕೋಟ್ಯಾನ್, ಕಡೆಕಾರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಂಕರ್ ಸುವರ್ಣ, ಜಯ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಕಡೆಕಾರ್ ಇದರ ಗಂಗಾಧರ ಜಿ, ಕುತ್ಪಾಡಿಯ ಶ್ರೀರಾಮಕೃಷ್ಣ ಭಜನಾ ಮಂದಿರ ಇದರ ಅಧ್ಯಕ್ಷ ಹರೀಶ್ ಸುವರ್ಣ, ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಕಡೆ ಕಾರು ಇದರ ಅಧ್ಯಕ್ಷೆ ವನಜ ಜಯಕರ್, ನಿಡಂಬೂರು ಯುವಕ ಮಂಡಲ ಇದರ ಅಧ್ಯಕ್ಷ ದೀಪಕ್ ಪುತ್ರನ್
ಸ್ವಚ್ಛ ಭಾರತ ಕೊರ್ಡಿನೇಟರ್ ರಘುನಾಥ್, ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷ ತಾರಾನಾಥ್ ಸುವರ್ಣ,ನಾರಾಯಣ ಬಿ. ಎಸ್.ಶೇಖರ್ ಅಂಚನ್
ದಿವಾಕರ್ ಪೂಜಾರಿ ಉಪಸ್ಥಿತರಿದ್ದರು.