ಶಾಸಕರ ಶಿಫಾರಸ್ಸು ಪತ್ರದಲ್ಲಿ ನಿಷೇಧಿತ ಪದ ಬಳಕೆ ಉದ್ದೇಶ ಪೂರ್ವಕವಲ್ಲ: ದಿನಕರ ಬಾಬು

ಉಡುಪಿ: ಶಾಸಕರು ಸಮಾಜ ಕಲ್ಯಾಣ ಇಲಾಖೆಯ ಬದಲಿ ಕಾಮಗಾರಿ ಶಿಫಾರಸ್ಸು ಪತ್ರದಲ್ಲಿ ನಿಷೇಧಿತ ಪದ ಬಳಕೆ ಉದ್ದೇಶಪೂರ್ವಕವಲ್ಲ ಎಂದು ಬಿಜೆಪಿ ಎಸ್ ಸಿ ಮೋರ್ಚಾದ ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ತಿಳಿಸಿದ್ದಾರೆ.

ಕೊಡವೂರು ಗ್ರಾಮದ ಸ್ಥಳೀಯರ ಬೇಡಿಕೆಯಂತೆ ನಗರಸಭಾ ಸದಸ್ಯರ ಕೋರಿಕೆಯ ಮೇರೆಗೆ ಅವರು ಸೂಚಿಸಿದ ಕಾಮಗಾರಿಗಳ ಫಲಾನುಭವಿಗಳ ಹೆಸರನ್ನು ಶಿಫಾರಸ್ಸು ಪತ್ರದಲ್ಲಿ ಉಲ್ಲೇಖ ಮಾಡಲಾಗಿದ್ದು ಇದರಲ್ಲಿ ಯಾವುದೇ ವ್ಯಕ್ತಿ ಹಾಗೂ ಸಮುದಾಯವನ್ನು ಅವಮಾನಿಸುವ ದುರುದ್ದೇಶ ಹೊಂದಿಲ್ಲ.

ಉಡುಪಿ ಜಿಲ್ಲೆಯ ವಿವಿಧ ಭಾಗದಲ್ಲಿ ಹಲವು ಮಂದಿ ತಮ್ಮ ಉಪನಾಮವಾಗಿ ಸರಕಾರಿ ದಾಖಲೆಗಳಲ್ಲಿ ಇನ್ನೂ ಕೂಡಾ ನಿಷೇಧಿತ ಪದವನ್ನು ಹೊಂದಿರುವ ಉದಾಹರಣೆಗಳಿವೆ.

ಶಾಸಕ ಯಶ್ ಪಾಲ್ ಸುವರ್ಣ ರವರು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಗ್ರ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ ಹಾಗೂ ಸಮಾಜದ ಸರ್ವರೊಂದಿಗೆ ಉತ್ತಮ ಬಾಂಧವ್ಯ ಅತೀವ ಗೌರವ ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!