ಕರ್ನಾಟಕ ಹೈಕೋರ್ಟ್ ನ ನೂತನ ಸಿಜೆ ಆಗಿ ನಿಲಯ್ ವಿಪಿನ್​ಚಂದ್ರ ಅಂಜಾರಿಯಾ ನೇಮಕ

ಬೆಂಗಳೂರು, ಫೆ.16: ಕರ್ನಾಟಕ ಹೈಕೋರ್ಟ್​ ಗೆ ನೂತನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆ) ನಿಲಯ್ ವಿಪಿನ್​ಚಂದ್ರ ಅಂಜಾರಿಯಾ ಅವರು ನೇಮಕಗೊಂಡಿದ್ದಾರೆ. ಇವರ ನೇಮಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

ಫೆ. 24 ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆ ಸುಪ್ರೀಂಕೋರ್ಟ್ ಕೊಲಿಜಿಯಂ, ನಿಲಯ್ ವಿಪಿನ್​ಚಂದ್ರ ಅಂಜಾರಿಯಾ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಇದೀಗ ದಿನೇಶ್ ಕುಮಾರ್ ಅವರ ನಿವೃತ್ತಿ‌ಯ ಬಳಿಕ ಅಂಜಾರಿಯಾ ಅವರು ಹೈಕೋರ್ಟ್​ ನ ಸಿಜೆ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಇತ್ತೀಚೆಗಷ್ಟೇ ರಾಷ್ಟ್ರಪತಿ ಅವರು ಕರ್ನಾಟಕ ಹೈಕೋರ್ಟ್‌ ನ ಸಿಜೆ ಆಗಿದ್ದ ಪಿ.ಬಿ.ವರಾಳೆ ಅವರನ್ನು ಸುಪ್ರೀಂ ಕೋರ್ಟ್‌ ನ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಬಳಿಕ ಪಿ.ಬಿ.ವರಾಳೆ ಅವರ ಹುದ್ದೆಗೆ ಪಿ.ಎಸ್.ದಿನೇಶ್ ಕುಮಾರ್ ಅವರನ್ನು ನೇಮಿಸಲಾಗಿತ್ತು. ಇದೀಗ ಅವರು ನಿವೃತ್ತಿಯಾಗುತ್ತಿರುವ ಹಿನ್ನೆಲೆ ನೂತನ ಸಿಜೆ ಯನ್ನು ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!