ಬಂಟ ಅಭಿವೃದ್ಧಿ ನಿಗಮ ಸ್ಥಾಪನೆ ಇಲ್ಲ, ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 1 ರೂ. ಅನುದಾನವಿಲ್ಲ- ವಿ.ಸುನಿಲ್ ಕುಮಾರ್
ಕಾರ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಂಡ ಕೆಟ್ಟ ಬಜೆಟ್ ಆಗಿದ್ದು, ಕರಾವಳಿ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿಲ್ಲ.
ಬಜೆಟ್ ಪೂರ್ತಿ ಸುಳ್ಳುಗಳೇ ತುಂಬಿದ್ದು, ಮುಗ್ಗರಿಸುತ್ತಿರುವ ರಾಜ್ಯದ ಆರ್ಥಿಕತೆಯ ಪ್ರತಿಬಿಂಬ ಇದಾಗಿದೆ. ಬಂಟ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬಜೆಟ್ ನಲ್ಲಿ ಅವಕಾಶ ಕಲ್ಪಿಸುತ್ತೇನೆ ಎಂದು ಘೋಷಿಸಿದ್ದ ಸಿದ್ದರಾಮಯ್ಯ ಕೈ ಕೊಟ್ಟಿದ್ದಾರೆ. ಬ್ರಹ್ಮರ್ಷಿ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 1 ರೂ.ಅನುದಾನವನ್ನೂ ನೀಡಿಲ್ಲ. ಪಶ್ಚಿಮ ವಾಹಿನಿ ಸೇರಿದಂತೆ ನೀರಾವರಿ ಯೋಜನೆಗಳಿಗೆ ಅನುದಾನ ಕಲ್ಪಿಸಿಲ್ಲ. ಮಂಗಳೂರು- ಬೆಂಗಳೂರು ಕಾರಿಡಾರ್ ಹೆಸರೇನೋ ಕೇಳುವುದಕ್ಕೆ ಚೆನ್ನಾಗಿದೆ. ಆದರೆ ಅದರ ಸ್ವರೂಪ ಹಾಗೂ ಅನುದಾನದ ಬಗ್ಗೆ ಉಲ್ಲೇಖವೇ ಇಲ್ಲ. ಒಟ್ಟಾರೆಯಾಗಿ ಇದೊಂದು ಬೋಗಸ್ ಬಜೆಟ್- ವಿ ಸುನಿಲ್ ಕುಮಾರ್ ಶಾಸಕರು ಕಾರ್ಕಳ