ಫೆ.24: ಆಜಾದ್ ಹಿಂದ್ ಶಿವಾಜಿಯಿಂದ ನೇತಾಜಿವರೆಗೆ ವಿಶೇಷ ಕಾರ್ಯಕ್ರಮ
ಉಡುಪಿಗೆ ಡಾ.ಸಂದೀಪ್ ಮಹಿಂದ್, ಅಜಿತ್ ಹನುಮಕ್ಕನವರ್
ಉಡುಪಿ: ಉಡುಪಿಯ ಕೂರ್ಮ ಫೌಂಡೇಶನ್ ಆಶ್ರಯದಲ್ಲಿ ಫೆ.24ರಂದು ‘ಆಜಾದ್ ಹಿಂದ್ – ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ ನಡೆಯಲಿದ್ದು, ಮಹಾರಾಷ್ಟ್ರದ ಪ್ರಖ್ಯಾತ ವಾಗ್ಮಿ ಸಂದೀಪ್ ಮಹಿಂದ್ ಹಾಗೂ ರಾಷ್ಟ್ರೀಯವಾದಿ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ಅವರು ಭಾಗವಹಿಸಲಿದ್ದಾರೆ.
ಉಡುಪಿ ಅಜ್ಜರಕಾಡು ಪುರಭವನದಲ್ಲಿ ಅಂದು ಸಂಜೆ 5 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಗಾಯಕ ರಜತ್ ಮಯ್ಯ ಮತ್ತು ತಂಡದಿಂದ ರಾಷ್ಟ್ರಗೀತೆಗಳು ಸ್ವರಭಾರತಿ ಹಾಗೂ ಮಂಜರಿಚಂದ್ರ ಮತ್ತು ಕಲಾವಿದರಿಂದ ನೃತ್ಯರೂಪಕಗಳು ನಮೋ ನಮೋ ಭಾರತಾಂಬೆ ಕಾರ್ಯಕ್ರಮ ನಡೆಯಲಿದೆ.
ಛತ್ರಪತಿ ಶಿವಾಜಿ ಕಂಡ ಹಿಂದವಿ ಸ್ವರಾಜ್ಯದ ಜಾಗೃತಿಗಾಗಿ ಬದುಕನ್ನೇ ಸಮರ್ಪಿಸಿದ ಕ್ರಾಂತಿಕಾರಿ ಸಂತ ಡಾ. ಸಂದೀಪ್ ಮಹಿಂದ್ ಗುರೂಜಿ, ಹಿರಿಯ ಪತ್ರಕರ್ತ ಅಜಿತ್ ಹನುಮನಕ್ಕನವರ್ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಕೂರ್ಮ ಫೌಂಡೇಶನ್ ನ ಪ್ರಕಟನೆ ತಿಳಿಸಿದೆ.