ಸುಳ್ಳು ಹೇಳಿ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿಗೆ ಮತದಾರ ತಕ್ಕ ಪಾಠ ಕಲಿಸಬೇಕಾಗಿದೆ- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಕೇವಲ ಅಧಿಕಾರಕ್ಕಾಗಿ ಈ ದೇಶದ ಜನರನ್ನು ಮೋಸಗೊಳಿಸಿ ಸುಳ್ಳು ಭರವಸೆಗಳನ್ನು ನೀಡಿ ಇದನ್ನು ಇನ್ನು ಕೂಡ ಮುಂದುವರೆಸಿಕೊಂಡು ಮುಂದೆ ಇದೇ ಸುಳ್ಳಿನ ಹೇಳಿಕೆಯಿಂದ ಜಯಗಳಿಸಿ ಅಧಿಕಾರವನ್ನು ಪಡೆದುಕೊಳ್ಳಲು ಬಿಜೆಪಿಯ ಡೋಂಗಿ ಟೀಮ್ ಕಾರ್ಯಚರಿಸುತಿರುವುದು ನಮ್ಮ ದೇಶದ ಹಾಗೂ ರಾಜ್ಯದ ಜನರ ದುರಾದೃಷ್ಟ.

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರನ್ನು ಹೊಡೆದು ಓಡಿಸುವಂತವ ಹೀನ ಕೃತ್ಯವನ್ನು ನಮ್ಮ ದೇಶದ ಆಡಳಿತ ನಡೆಸುತ್ತಿರುವ ಮೋದಿ ಸರಕಾರ ಮಾಡುತ್ತಿದೆ.

ನಮ್ಮ ದೇಶದ ರೈತರು ನಮ್ಮ ದೇಶದ ಬೆನ್ನೆಲುಬು ಎಂಬುದು ಈ ದುಷ್ಟ ಬಿಜೆಪಿಯವರಿಗೆ ಏಕೆ ಇನ್ನೂ ತಿಳಿದಿಲ್ಲ. ಅಧಿಕಾರಕ್ಕಾಗಿ ಮಾತ್ರ ತಾವು ರೈತರ ಪರ ಯುವಕರ ಪರ, ಕಾರ್ಮಿಕರ, ಬಡ ಜನರ ಪರ ಎಂದು ಬೊಗಳೆ ಬಿಡುತ್ತಿರುವ ಮೋದಿ ಅವರ ನಿಜ ಬಣ್ಣ ಈಗ ಬಯಲಾಗುತ್ತಿದೆ. ರೈತರ ಬೇಡಿಕೆಗಳನ್ನು ಈಡೇರಿಸದ ಈ ಮೋದಿಯ ಸರಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಯ ಬೇಕಾಗಿದೆ.

ದೇಶದ ರೈತರು ಕೇವಲ ತಮ್ಮ ಕಷ್ಟಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಹೊರತು, ಈ ಬಿಜೆಪಿಯ ನಾಯಕರಂತೆ ಅಧಿಕಾರದ ಆಸೆಗಾಗಿ ಹೋರಾಟ ನಡೆಸುತ್ತಿಲ್ಲ ಎಂಬುದು ಕೇಂದ್ರದ ಬಿಜೆಪಿ ನಾಯಕರಿಗೆ ಹಾಗೂ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯವರಿಗೆ ಇದು ತಿಳಿದರೆ ಒಳಿತು.

ಇಡೀ ದೇಶದಲ್ಲಿ ಬಿಜೆಪಿ ಪಕ್ಷದ ಸಂಸದರು, ಶಾಸಕರು, ನಗರಸಭಾ ಸದಸ್ಯರು ಎಲ್ಲ ಬಿಜೆಪಿ ಸದಸ್ಯರುಗಳು. ಎಲ್ಲರೂ ಕೂಡ ಮೋದಿಯವರ ಹೆಸರೇಳಿಕೊಂಡು ಗೆಲುವು ಸಾಧಿಸಿರುತ್ತಾರೆ. ಆದರೆ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ನಡೆಸದೆ ಭ್ರಷ್ಟಾಚಾರದಲ್ಲಿ ಮಗ್ನರಾಗಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಆದಷ್ಟು ಬೇಗ ಅಧಿಕಾರದ ಆಸೆಯನ್ನು ಬಿಟ್ಟು ನಮ್ಮ ಜನಸಾಮಾನ್ಯರ ಕಷ್ಟವನ್ನು ನಿವಾರಿಸುವಂತಹ ಕೆಲಸವನ್ನು ಬಿಜೆಪಿ ಹಾಗೂ ಮೋದಿ ಅವರ ಸರಕಾರ ಮಾಡಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ನ ರಾಜೀವ ಗಾಂಧಿ ಪಂಚಾಯತ್ ರಾಜ್

Leave a Reply

Your email address will not be published. Required fields are marked *

error: Content is protected !!