ಶಿರ್ವ: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು
ಶಿರ್ವ ಫೆ.12(ಉಡುಪಿ ಟೈಮ್ಸ್ ವರದಿ): ಕಸದ ರಾಶಿಗೆ ಹಾಕಿದ್ದ ಬೆಂಕಿ ಆಕಸ್ಮಿಕವಾಗಿ ಸೀರೆಗೆ ತಗುಲಿ ಗಂಭೀರ ಗಾಯಗೊಂಡ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಠಾಣಾ ವ್ಯಾಪ್ತಿಯ ನಿವಾಸಿ ಶಾರದಾ (83) ಮೃತಪಟ್ಟವರು. ಫೆ.9 ರಂದು ಬೆಳಿಗ್ಗೆ ಮನೆ ಬಳಿಯ ಕಸವನ್ನು ರಾಶಿ ಹಾಕಿ ಬೆಂಕಿ ಕೊಡಲಾಗಿತ್ತು. ಈ ಬೆಂಕಿ ಆಕಸ್ಮಿಕವಾಗಿ ಶಾರದಾ ಅವರು ಧರಿಸಿದ್ದ ಸೀರೆಗೆ ತಗುಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ನೀಡಿದ ಮಾಹಿತಿಯಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.