ಪಡುಬಿದ್ರಿ: ಮನೆಯ ಬಳಿ ನಿಲ್ಲಿಸಿದ್ದ ಲಾರಿಯ ಬಿಡಿಭಾಗ ಕಳವು

ಪಡುಬಿದ್ರಿ ಫೆ.12(ಉಡುಪಿ ಟೈಮ್ಸ್ ವರದಿ): ಮನೆಯ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯನ್ನು ಕಳ್ಳರು ಕಳವು ಮಾಡಿ ಅದರಲ್ಲಿದ್ದ ಬ್ಯಾಟರಿ ಸಹಿತ ಉಪಯುಕ್ತ ಸಲಕರೆಣೆಗಳನ್ನು ಕದ್ದು ಪರಾರಿಯಾಗಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಟಿಪ್ಪರ್ ಲಾರಿ ಮಾಲೀಕ ಶಾಶ್ವತ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ನಿನ್ನೆ ಕಾಪುವಿನ ತೆಂಕ ಎರ್ಮಾಳ್ ಗ್ರಾಮದ ಪೆಟ್ರೋಲ್ ಪಂಪ್ ಬಳಿ ಇರುವ ತಮ್ಮ ಮನೆಯ ಬಳಿ ತಮ್ಮ ಟಿಪ್ಪರ್ ಲಾರಿಯನ್ನು ನಿಲ್ಲಿಸಿದ್ದರು. ಈ ಟಿಪ್ಪರ್ ಲಾರಿಯನ್ನು ಕಳ್ಳತನ ಮಾಡಿರುವುದು ಇವರ ಗಮನಕ್ಕೆ ಬಂದಾಗ ಮೊಬೈಲ್ ನಲ್ಲಿ ಅಳವಡಿಸಿದ್ದ ಜಿಪಿಎಸ್ ಮುಖೇನ ನೋಡಿದಾಗ, ಟಿಪ್ಪರ್ ಕಾಪು ಠಾಣಾ ವ್ಯಾಪ್ತಿಯ ಪಾಂಗಾಳದ ಬ್ರಿಡ್ಜ್ ಬಳಿ ಇರುವುದು ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿ ನೋಡಿದಾಗ ಟಿಪ್ಪರ್ ಲಾರಿಯಲ್ಲಿದ್ದ ಅಂದಾಜು 98,000/- ರೂ. ಮೌಲ್ಯದ ಸ್ಟೆಪ್ನಿ, 05 ಡಿಸ್ಕ್, 05 ಟಯರ್‍ಗಳು ಮತ್ತು ಲಾರಿಯ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!