ಫೆ.15ರಿಂದ ಉಡುಪಿ ಜಿಲ್ಲೆಯಾದ್ಯಂತ ಗ್ಯಾರಂಟಿ ಸಮಾವೇಶ

ಉಡುಪಿ, ಫೆ.12: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಜಿಲ್ಲೆಯ ಪ್ರತಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯಾದ್ಯಂತ ಗ್ಯಾರಂಟಿ ಸಮಾವೇಶ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಫೆ.15 ರಂದು ಬ್ರಹ್ಮಾವರದ ನಾರಾಯಣ ಗುರು ಸಭಾ ಭವನ ಹಾಗೂ ಹೆಬ್ರಿಯ ಸಮಾಜ ಮಂದಿರ ಗ್ರಾಮ ಪಂಚಾಯತ್

ಫೆ. 16 ರಂದು ಉಡುಪಿಯ ಟೌನ್ ಹಾಲ್

ಫೆ. 17 ರಂದು ಕುಂದಾಪುರ ತಾಲೂಕು ಪಂಚಾಯತ್, ಕೋಟದ ಸಹಕಾರಿ ವ್ಯವಸಾಯಕ ಸಂಘ (ಸಿ.ಎ) ಬ್ಯಾಂಕ್ ಇದರ ಹಾಲ್ ನಲ್ಲಿ ಹಾಗೂ ಕಾರ್ಕಳದ ಮಂಜುನಾಥ ಪೈ ಹಾಲ್

ಫೆ.19 ರಂದು ವಂಡ್ಸೆಯ ಮಹಾತ್ಮ ಗಾಂಧಿ ಸಭಾಭವನ, ಅಜೆಕಾರು ವಿನ ಮರ್ಣೆ ಗ್ರಾಮ ಪಂಚಾಯತ್ ಹಾಗೂ ಬೈಂದೂರು ಆಡಳಿತ ಸೌಧದ ಆವರಣ.

ಫೆ.21 ರಂದು ಕಾಪು ಆಡಳಿತ ಸೌಧದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!