ಮಾ.16: “ರಾಜರತ್ನ ಟ್ರೋಫಿ-2024” ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ,ಫೆ.10(ಉಡುಪಿ ಟೈಮ್ಸ್ ವರದಿ) ಅಪ್ಪು ಅಟಾಕರ್ಸ್ ಮಣೂರು ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಪಿನ್ ಕೋಡ್ ಮಾದರಿಯ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ “ರಾಜರತ್ನ ಟ್ರೋಫಿ-2024” ಮಾರ್ಚ್ 16 ರಂದು ಮಣೂರಿನ ನಡುಬೆಟ್ಟಿನಲ್ಲಿ ನಡೆಯಲಿದೆ.
ಈ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಈ ಪಂದ್ಯಾಟ ಪ್ರಥಮ ಬಹುಮಾನ 25,555, ದ್ವಿತೀಯ ಬಹುಮಾನ 17,777, ಹಾಗೂ ತೃತೀಯ ಬಹುಮಾನ 11,111 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಪಿ ಮತ್ತು ಚತುರ್ಥ ಬಹುಮಾನವಾಗಿ ಟ್ರೋಪಿ ನೀಡಲಾಗುವುದು.
ಪಂದ್ಯಾಟದ ಪ್ರವೇಶ ಶುಲ್ಕ 2,000 ರೂ. ಪಾವತಿಸಬೇಕು.
ಇದೇ ಸಮಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸಾಧಕರದ ಯೋಗೀಶ್ ಕಾಂಚನ್, ಅಖಿಲೇಶ್ ಕೋಟಾ, ಪ್ರೇರಣಾ ರವರಿಗೆ ಸನ್ಮಾನ ಕಾರ್ಯಕ್ರಮವಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸತೀಶ್ ಹೆಚ್ ಕುಂದರ್, ಸುಬ್ರಾಯ ಆಚಾರ್, ಸಂತೋಷ್ ಸುವರ್ಣ, ನಾಗೇಶ್ ಪೂಜಾರಿ,ವಿಷ್ಣುಮೂರ್ತಿ ಮಯ್ಯ, ವಿಠ್ಠಲ ಪೂಜಾರಿ ಸಾಲಿಗ್ರಾಮ,ಅರುಣಾಚಾಲ ಮಯ್ಯ, ಶಿವರಾಮ್ ಶೆಟ್ಟಿ ನಡುಬೆಟ್ಟು, ಅಚ್ಚುತ ಹಂದೆ,ಗೋಪಾಲ್ ಪೈ ಮಣೂರು ಹಾಗೂ ತಂಡದ ಸದಸ್ಯರಿಂದ ಬಿಡುಗಡೆ ಮಾಡಲಾಯಿತು.
ಹೆಚ್ಚಿನ ಮಾಹಿತಿಗಾಗಿ: 9663758603, 9741728056, 8197172975 ನಂಬರಗಳಿಗೆ ಕರೆ ಮಾಡುವಂತೆ ಸಂಘಟಕರು ತಿಳಿಸಿದ್ದಾರೆ.