ಅ. 25 ರಿಂದ ಮಂಗಳೂರು – ಮೈಸೂರಿಗೆ ಏರ್ ಇಂಡಿಯಾ ಸೇವೆ ಪ್ರಾರಂಭ ?
ಮೈಸೂರು: ಅಕ್ಟೋಬರ್ 25ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆಂದು ಸಂಸ್ಥೆಯ ಉನ್ನತ ಮೂಲವು ತಿಳಿಸಿವೆ.
ಪ್ರಾಯೋಗಿಕ ಸೇವೆಯ ನಂತರದ ವರದಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ವಿಮಾನ ಸೇವೆ ಪ್ರಾರಂಭಿಸುವಂತೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮತ್ತು ಕೈಗಾರಿಕೋದ್ಯಮಿಗಳು ಏರ್ ಇಂಡಿಯಾಗೆ ಮನವಿ ಮಾಡಿದ್ದರು.
ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳೂರಿಗೆ ಬೆಳಿಗ್ಗೆ 6.50 ಕ್ಕೆ ಬರುವ ವಿಮಾನವನ್ನೇ ಮೈಸೂರಿನಲ್ಲಿ ಲ್ಯಾಂಡ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಿಮಾನ ಬೆಳಿಗ್ಗೆ 7.55 ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50 ಕ್ಕೆ ಮಂಗಳೂರು ತಲುಪಲಿದೆ.