ಡ್ರಗ್ಸ್ ಮಾರಾಟ: ಬ್ರಹ್ಮಾವರದ ಆರೋಪಿಯ ಬಂಧನ

ಮಣಿಪಾಲ: ಎಂಡ್‌ಪಾಯಿಂಟ್ ಬಳಿ ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಬ್ರಹ್ಮಾವರದ ಫಜಲ್ ಎಂದು ತಿಳಿದು ಬಂದಿದೆ. ಆರೋಪಿಯ ಬಳಿ 30 ಗ್ರಾಂ ಬ್ರೌನ್ ಶುಗರ್, 54 MDMA ಮಾತ್ರೆಗಳು  ಅಂದಾಜು 4,63,600 ಮೌಲ್ಯದ ಡ್ರಗ್ಸ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಡಾರ್ಕ್ ವೆಬ್ ಆನ್ಲೈನ್ ಮೂಲಕ ಬರುವ ಡ್ರಗ್ಸ್ ಗಳನ್ನು ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ದಾಳಿಯನ್ನು ಉಡುಪಿ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ , ಹಾಗೂ ಉಡುಪಿ ಪೋಲಿಸ್ ಉಪಾಧೀಕ್ಷಕರಾದ ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರು ಕುಂದಾಪುರ ವಿಭಾಗದ ಹರಿರಾಮ್ ಶಂಕರ್ ಇವರ ನೇತೃತ್ವದಲ್ಲಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ನಾಗರಾಜ್, ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ. ಗೌಡ, ಪಿಎಸ್ಐ ರಾಜಶೇಖರ್ ವಂದಲಿ, ಎ ಎಸ್ ಐ ಶೈಲೇಶ್, ಪ್ರಸನ್ಮ ಹೆಚ್ , ಥೋಮ್ಸನ್ , ಆದರ್ಶ್, ಸುದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.


1 thought on “ಡ್ರಗ್ಸ್ ಮಾರಾಟ: ಬ್ರಹ್ಮಾವರದ ಆರೋಪಿಯ ಬಂಧನ

  1. All illegal activities in Manipal should be investigated..students lives are in danger and being spoiled.. in this case it is next to DC office..right under the government nose.. a much strict vigilance is required mear manipal college area.

Leave a Reply

Your email address will not be published. Required fields are marked *

error: Content is protected !!