ತೀರ್ಥಹಳ್ಳಿ: ಮತ್ತೆ ಕುಸಿದ ರಂಜದಕಟ್ಟೆಯ ಸೇತುವೆ, ಶಿವಮೊಗ್ಗ- ಉಡುಪಿ ಸಂಚಾರ ಸ್ಥಗಿತ
ಶಿವಮೊಗ್ಗ: ಕೆಲ ದಿನಗಳ ಹಿಂದೆ ಕುಸಿತವಾಗಿದ್ದ ತೀರ್ಥಹಳ್ಳಿಯ ರಂಜದಕಟ್ಟೆ ಸೇತುವೆ ಮತ್ತೆ ಕುಸಿದಿದ್ದು, ಶಿವಮೊಗ್ಗ ಮತ್ತು ಉಡುಪಿ ನಡುವಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಭಾರಿ ಮಳೆಯಿಂದಾಗಿ ಸೆ. 24ರಂದು ಸೇತುವೆಯ ಒಂದು ಭಾಗದಲ್ಲಿ ಬಿರುಕು ಕಾಣಿಸಿತ್ತು. ಸೇತುವೆಯ ಕೆಳಭಾಗದಲ್ಲಿ ಬಿರುಕುಗಳು ಉಂಟಾಗಿದ್ದ ಕಾರಣಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಉಡುಪಿ ಮಣಿಪಾಲಕ್ಕೆ ದಿನ ನಿತ್ಯ ನೂರಾರು ವಾಹನ ಸಂಚರಿಸಲು ಇದೆ ಮುಖ್ಯ ರಸ್ತೆಯಾದ್ದರಿಂದ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು.
ಆದರೆ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಈ ತಾತ್ಕಾಲಿಕ ಸೇತುವೆಯೂ ಕುಸಿದಿದ್ದು ಮತ್ತೆ ಸಂಚಾರ ಸ್ಥಗಿತಗೊಂಡಿದೆ.