ಉಡುಪಿ: ಸಿಎ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲೇ ಉತ್ತೀರ್ಣರಾದ ಶೀತಲ್ ವಿ.ಶೆಟ್ಟಿ
ಉಡುಪಿ: ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ಆಯೋಜಿಸಿದ ಸಿಎ ಪರೀಕ್ಷೆಯಲ್ಲಿ ವಾರ್ಜೆಯ ನಿವಾಸಿ ಶೀತಲ್ ವಿ ಶೆಟ್ಟಿ ಪ್ರಥಮ ಹಂತದಲ್ಲೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಮೂಲತಃ ಕಾರ್ಕಳ ಬಜಗೋಳಿಯ ವಸಂತ್ ಶೆಟ್ಟಿ ಮತ್ತು ಸವಿತಾ ವಿ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಅವರ ಸಾಧನೆಯನ್ನು ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಉದ್ಯಮಿಗಳು, ಹಿತೈಷಿಗಳು ಅಭಿನಂದಿಸಿದ್ದಾರೆ.