ಉಡುಪಿ: ಕರಂಬಳ್ಳಿ ಕೋಳಿ ಅಂಕಕ್ಕೆ ದಾಳಿ- 13 ಮಂದಿ ವಶಕ್ಕೆ

ಮಣಿಪಾಲ: ಕರಂಬಳ್ಳಿ ಸಮೀಪ ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 13 ಮಂದಿ ಹಾಗೂ 21 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ದಾಳಿ ಸಂದರ್ಭದಲ್ಲಿ ಹಲವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ‌ಮಣಿಪಾಲ ಪೊಲೀಸ್‌ ಉಪನಿರೀಕ್ಷಕರಿಗೆ ಬಂದ ಮಾಹಿತಿಯಂತೆ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿಬಾಳು ಕಟ್ಟಿ ಒಂದಕ್ಕೊಂದು ತಿವಿದುಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿದ್ದಾರೆ ದೂರು ಬಂದಿತ್ತು. ತಕ್ಷಣ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿಗಳಾದ ಚಂದ್ರಶೇಖರ, ಹರೀಶ್‌, ಸಚಿನ್‌, ಯೋಗೀಶ್‌, ನಾಗೇಶ್‌, ಪ್ರಕಾಶ, ಜಯ, ಸುರೇಶ್‌, ಅನಿಲ್‌ ನವೀನ್‌‌, ಶಾಹಿನ್‌, ಶಂಕರ, ಈಶ್ವರ ಇವರನ್ನು ವಶಕ್ಕೆ ಪಡೆದು 21 ಕೋಳಿ, ಆಟಕ್ಕೆ ಬಳಸಿದ ನಗದು ಹಣ ರೂಪಾಯಿ 2600/- ಮತ್ತು 2 ಕೋಳಿ ಬಾಳ್‌ಗಳನ್ನು  ವಶಕ್ಕೆ ಪಡೆದುಕೊಂಡಿರುವುದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!