ಕುಂದಾಪುರ: ವಿದ್ಯಾರ್ಥಿನಿ ಗಾರ್ಗಿ ದೇವಿ ಪರೀಕ್ಷಾ ಪೆ ಚರ್ಚಾಗೆ ಆಯ್ಕೆ
ಕುಂದಾಪುರ, ಜ.29: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ.ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್.ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ ಪರೀಕ್ಷಾ ಪೆ ಚರ್ಚಾ 2024 ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಕೆ ದೇವಲ್ಕುಂದದ ಅಶೋಕ್ ಸುವರ್ಣ ಮತ್ತು ನಾಟ್ಯ ವಿದುಷಿ ಪ್ರವಿತಾ ಅಶೋಕ್ ದಂಪತಿಯ ಪುತ್ರಿ.