ಬೆಳಗಾವಿ: ಸಿಲಿಂಡರ್ ಸ್ಫೋಟ- ಉಡುಪಿ ಮೂಲದ ಒಂದೇ ಕುಟುಂಬದ ಐವರು ಗಂಭೀರ
ಬೆಳಗಾವಿ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಬಸವನಗಲ್ಲಿಯಲ್ಲಿ ನಡೆದಿದೆ.
ಲಲಿತಾ ಭಟ್ (48), ಮೋಹನ್ ಭಟ್ (56), ಕಮಲಾಕ್ಷಿ ಭಟ್ (80), ಗೋಪಾಲಕೃಷ್ಣ ಕೃಷ್ಣ ಭಟ್ (84) ಹಾಗೂ ಹೇಮಂತ್ ಭಟ್ (27) ಗಾಯಾಳುಗಳು. ಇವರೆಲ್ಲ ಉಡುಪಿಯ ಆದಿ ಉಡುಪಿಯವರು ಎಂದು ತಿಳಿದುಬಂದಿದೆ. ಕುಟುಂಬದ ಇನ್ನೋರ್ವ ಸದಸ್ಯ ಶರತ್ ಮನೆಯಿಂದ ಹೊರಹೋಗಿದ್ದರಿಂದ ಪಾರಾಗಿದ್ದಾರೆ.