ಲಯನ್ಸ್ ಕ್ಲಬ್ ಉಡುಪಿ ರಾಯಲ್: ಸ್ವಚ್ಛ ಭಾರತ ಕಾರ್ಯಕ್ರಮದ ಮಾಹಿತಿ ಪತ್ರ ಬಿಡುಗಡೆ
ಉಡುಪಿ: ಲಯನ್ಸ್ ಸೇವಾ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮ ಸ್ವಚ್ಛ ಭಾರತ ಕಾರ್ಯಕ್ರಮದ ಅಡಿಯಲ್ಲಿ ಲಯನ್ಸ್ ಕ್ಲಬ್ ಉಡುಪಿ ರಾಯಲ್ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ಮಾಹಿತಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಇವೆಂಟ್ ಮ್ಯಾನೇಜ್ ಮೆಂಟ್ ಅಂಬಾಸಿಡರ್ ಲಯನ್ ಸಾಧನಾ ಕಿಣಿ ಮಾಹಿತಿ ಪತ್ರ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ರೀಜನ್ ಸೆಕ್ರೇಟರಿ ಲ. ಕಿರಣ್ ರಂಗಯ್ಯಾ, ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಜಾನ್ ಫೆರ್ನಾಂಡಿಸ್, ಲ. ಗೋಡ್ಫ್ರೀ ಡಿಸೋಜ, ಉಡುಪಿ ರಾಯಲ್ ಕ್ಲಬ್ಬಿನ ಸದಸ್ಯರಾದ ಲ. ಜೋಸೆಫ್ ರೆಬೆಲ್ಲೋ, ಲ. ಸದಾಶಿವ ಬೈಲೂರು, ಲ. ಸುಧಾಕರ ಭಂಡಾರಿ ಉಪಸ್ಥಿತರಿದ್ದರು.
ಉಡುಪಿ ರಾಯಲ್ ಅಧ್ಯಕ್ಷ ಲ. ಡಾ. ಸಂತೋಷ್ ಕುಮಾರ್ ಬೈಲೂರು ಸ್ವಾಗತಿಸಿದರು, ಕಾರ್ಯದರ್ಶಿ ಲ. ರಾಜೇಶ್ ಬಂಗೇರಾ ವಂದಿಸಿದರು, ಲ. ವಿನ್ಸೆಂಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.