ವಿವಾಹ ಸಮಾರಂಭ: 100ಕ್ಕಿಂತ ಹೆಚ್ಚು ಜನರಿಗೆ ಅವಕಾಶ

ಬೆಂಗಳೂರು: ವಿವಾಹ ಮತ್ತು ಇತರೆ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜನರು ಸೇರಲು ರಾಜ್ಯ ಸರ್ಕಾರ ಷರತ್ತುಬದ್ಧ ಅವಕಾಶ ಕಲ್ಪಿಸಿದೆ. ಕೇಂದ್ರ ಸರ್ಕಾರದ ‘ಅನ್‌ಲಾಕ್–5’ ಮಾರ್ಗಸೂಚಿ ಪ್ರಕಾರ, ಗುರುವಾರದಿಂದ (ಅ. 15) ಇದು ಅನ್ವಯವಾಗಲಿದೆ.

ಕೇಂದ್ರದ ಮಾರ್ಗಸೂಚಿಯನ್ನು ಉಲ್ಲೇಖಿಸಿ ಬುಧವಾರ ಆದೇಶ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ‘ಅನ್‌ಲಾಕ್‌– 5 ಅನ್ವಯ ಕಂಟೈನ್‌ಮೆಂಟ್‌ ವಲಯ ಬಿಟ್ಟು ಉಳಿದೆಡೆ ಅ.15ರ ನಂತರ 100ಕ್ಕೂ ಹೆಚ್ಚು ಜನರು ಸೇರುವ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು ಮತ್ತು ಇತರ ಸಮಾರಂಭಗಳಿಗೆ ಮಾಸ್ಕ್‌, ಅಂತರ ಕಾಯ್ದುಕೊಳ್ಳುವಿಕೆ, ಥರ್ಮಲ್‌ ಸ್ಕ್ಯಾನಿಂಗ್‌ ಮತ್ತು ಸ್ಯಾನಿಟೈಸರ್‌ ವ್ಯವಸ್ಥೆ ಕಡ್ಡಾಯಗೊಳಿಸಿ ಅನುಮತಿ ನೀಡಲಾಗಿದೆ’ ಎಂದಿದ್ದಾರೆ.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಅ. 31ರವರೆಗೆ ಲಾಕ್‌ಡೌನ್‌ ಇರಲಿದೆ.

Leave a Reply

Your email address will not be published. Required fields are marked *

error: Content is protected !!