ಉಡುಪಿ: ಜ.28 ರಂದು ಮಡಿವಾಳ ಸಂಗಮ- 2024
ಉಡುಪಿ: ಶ್ರೀರಜಕ ಯಾನೆ ಮಡಿವಾಳರ ಸಂಘ ಉಡುಪಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಯೋಗದೊಂದಿಗೆ ಮಡಿವಾಳರ ಕುಲಗುರು ಮಾಚಿದೇವರ ಜನ್ಮ ಜಯಂತಿಯ ಪ್ರಯುಕ್ತ ಮಡಿವಾಳ ಸಂಗಮ-2024 ಜ. 28, ಬೆಳಗ್ಗೆ 10 ಗಂಟೆಗೆ ಮಣಿಪಾಲ ಟ್ಯಾಪ್ಮಿ ಸಮೀಪ (ಸಂಘದ ಸ್ವಂತ ಜಾಗದಲ್ಲಿ )ನಡೆಯಲಿದೆ.
ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಸ್ಪರ್ಧೆ, ಮಾಚಿದೇವರ ಚಿತ್ರ ಬಿಡಿಸುವ ಸ್ಪರ್ಧೆ, ಬಹುಮಾನ ವಿತರಣೆ, ಮನೋರಂಜನಾ ಕಾರ್ಯಕ್ರಮಗಳು ಜರಗಲಿದೆ.ದೊಡ್ಡಣಗುಡ್ಡೆ ಶ್ರೀಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಗುರೂಜಿ ಸಮಾಜದ ಸಾಧಕರನ್ನು ಸನ್ಮಾನಿಸಲಿದ್ದಾರೆ ಎಂದು ಶ್ರೀರಜಕ ಯಾನೆ ಮಡಿವಾಳರ ಸಂಘದ ಅಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ತಿಳಿಸಿದ್ದಾರೆ.