ಲೋಕಸಭೆ ಚುನಾವಣೆ: ರಾಜ್ಯದ ಬಿಜೆಪಿ ಉಸ್ತುವಾರಿಯಾಗಿ ಸಂಸದ ರಾಧಾ ಮೋಹನ್ ದಾಸ್

ಬೆಂಗಳೂರು ಜ.27: ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕ ರಾಜ್ಯದ ಉಸ್ತುವಾರಿಯನ್ನಾಗಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಬಿಜೆಪಿ ಹೈಕಮಾಂಡ್ ನೇಮಕ ಮಾಡಲಾಗಿದೆ.

ಲೋಕಸಭೆ ಚುನಾವಣೆಗೆ 23 ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಈ ಪೈಕಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಕರ್ನಾಟಕದ ಉಸ್ತುವಾರಿಯನ್ನಾಗಿ ಮತ್ತು ಸುಧಾಕರ್ ರೆಡ್ಡಿ ಅವರನ್ನು ಕರ್ನಾಟಕದ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಉಳಿದಂತೆ ಉತ್ತರ ಪ್ರದೇಶದ ನೂತನ ಉಸ್ತುವಾರಿಯಾಗಿ ಬೈಜಯಂತ್ ಪಾಂಡಾ, ಬಿಹಾರದ ಚುನಾವಣಾ ಉಸ್ತುವಾರಿಯಾಗಿ ವಿನೋದ್ ತಾವ್ಡೆ ಒಡಿಶಾದ ಉಸ್ತುವಾರಿಯಾಗಿ ವಿಜಯಪಾಲ್ ತೋಮರ್, ಹಿಮಾಚಲದ ಉಸ್ತುವಾರಿಯನ್ನಾಗಿ ಶ್ರೀಕಾಂತ್ ಶರ್ಮಾ, ದಕ್ಷಿಣ ರಾಜ್ಯ ಕೇರಳದ ಉಸ್ತುವಾರಿಯನ್ನಾಗಿ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ನೇಮಿಸಲಾಗಿದೆ.

ಹಾಗೂ ಅಂಡಮಾನ್ ಮತ್ತು ನಿಕೋಬಾರ್?ಗೆ ವೈ ಸತ್ಯ ಕುಮಾರ್, ಅರುಣಾಚಲ ಪ್ರದೇಶಕ್ಕೆ ಅಶೋಕ್ ಸಿಂಘಾಲ್, ಚಂಡೀಗಢಕ್ಕೆ ವಿಜಯಭಾಯಿ ರೂಪಾನಿ, ಗೋವಾಕ್ಕೆ ಆಶಿಶ್ ಸೂದ್, ಜಾಖರ್ಂಡ್ ಗೆ ಲಕ್ಷ್ಮೀಕಾಂತ ಬಾಜಪೇಯಿ, ಲಡಾಖ್ ಗೆ ತರುಣ್ ಚುಗ್, ಲಕ್ಷ್ಯದ್ವೀಪಕ್ಕೆ ಅರವಿಂದ್ ಮೆನನ್, ಪುದುಚೇರಿಗೆ ನಿರ್ಮಲ್ ಕುಮಾರ್ ಸುರಾನಾ, ಸಿಕ್ಕಿಂಗೆ ದಿಲೀಪ್ ಜೈಸ್ವಾಲ್, ಉತ್ತರಾಖಂಡಕ್ಕೆ ದುಶ್ಯಂತ್ ಕುಮಾರ್ ಗೌತಮ್, ಬಿಹಾರಕ್ಕೆ ವಿನೋದ್ ತಾವ್ಡೆ, ಹರಿಯಾಣಕ್ಕೆ ಬಿಪ್ಲಬ್ ಕುಮಾರ್ ದೇವ್, ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ, ಮಧ್ಯಪ್ರದೇಶಕ್ಕೆ ಮಹೇಂದ್ರ ಕುಮಾರ್ ಸಿಂಗ್, ಒಡಿಶಾಕ್ಕೆ ವಿಜಯಪಾಲ್ ಸಿಂಗ್ ತೋಮರ್, ತಮಿಳುನಾಡಿಗೆ ಅರವಿಂದ್ ಮೆನನ್, ಪಶ್ಚಿಮ ಬಂಗಾಳಕ್ಕೆ ಮಂಗಲ್ ಪಾಂಡೆ ಇವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!