ಜ.28ರಂದು ಡಾಕ್ಟರ್ಸ್& ಅಲ್ಲೈಡ್ ಪ್ರೊಫೆಷನಲ್ಸ್ ಕ್ರೆಡಿಟ್ ಕೋ.ಆ. ಸೊಸೈಟಿ ಉದ್ಘಾಟನೆ
ಉಡುಪಿ ಜ.27(ಉಡುಪಿ ಟೈಮ್ಸ್ ವರದಿ): ಉಡುಪಿ ನಗರದ ಹೂವಿನ ಮಾರುಕಟ್ಟೆಯ ಎದುರು ಇರುವ ಗ್ರಾಸ್ ಲ್ಯಾಂಡ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಮೂರನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ “ಡಾಕ್ಟರ್ಸ್ ಅ್ಯಂಡ್ ಅಲ್ಲೈಡ್ ಪ್ರೊಫೆಷನಲ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ”ಯು ಜ.28ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವ ವೃತ್ತಿಪರರಿಗಾಗಿ ಆರಂಭಗೊಳ್ಳುತ್ತಿರುವ ನೂತನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಪ್ರೋ. ಚಾನ್ಸಲರ್ ಡಾ. ಎಚ್.ಎಸ್ ಬಲ್ಲಾಳ್ ಅವರು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಡಾಕ್ಟರ್ಸ್ ಅ್ಯಂಡ್ ಅಲ್ಲೈಡ್ ಪ್ರೊಫೆಷನಲ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕರಾದ ಡಾ.ಬಿ ವಿನಯ ಚಂದ್ರಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉಡುಪಿಯ ಆದರ್ಶ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ್, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರಿ ಸಂಘಗಳ ಉಪ ನೋಂದಣಾಧಿಕಾರಿ ರಮೇಶ್ ಎಚ್ ಎನ್ ಅವರು ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮುಖ್ಯ ಪ್ರವರ್ತಕರಾದ ಡಾ.ಡಾ.ಬಿ ವಿನಯ ಚಂದ್ರಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಜೋಗಿ ಉಪಸ್ಥಿತರಿದ್ದರು.