2024ರಲ್ಲಿ ಬಾಂಬ್ ದಾಳಿ, ಯುದ್ಧ, ಪ್ರವಾಹ, ಅಂತಾರಾಷ್ಟ್ರೀಯ ನಾಯಕರ ಸಾವು- ಕೋಡಿ ಶ್ರೀಗಳಿಂದ ಭವಿಷ್ಯ

ಬೆಂಗಳೂರು: ನಿರೀಕ್ಷೆಯಂತೆಯೇ ಸಂಕ್ರಾಂತಿ ಬಳಿಕ ಕೋಡಿ ಮಠದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು 2024ರ ಕುರಿತು ಭವಿಷ್ಯ ನುಡಿದಿದ್ದು, ಬಾಂಬ್ ದಾಳಿ, ಯುದ್ಧ, ಪ್ರವಾಹ, ಅಂತಾರಾಷ್ಟ್ರೀಯ ನಾಯಕರ ಸಾವಿನ ಕುರಿತು ಸುಳಿವು ನೀಡಿದ್ದಾರೆ.

ಜಗತ್ತಿನ ಮುಂದಿನ ಆಗುಹೋಗುಗಳ ಬಗ್ಗೆ ಆಗಾಗ ಭವಿಷ್ಯವನ್ನು ನುಡಿಯುವ ಕೋಡಿ ಮಠದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಈ ಬಾರಿಯೂ ತಮ್ಮ ಭವಿಷ್ಯ ನುಡಿದಿದ್ದು, ಈ ಬಾರಿ ಕೆಲ ಆತಂಕಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶ್ರೀಗಳ ಪ್ರಕಾರ, 2024ರಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯಲಿದ್ದು, ಜಗತ್ತು ಒಂದಷ್ಟು ಕೆಟ್ಟ ವಿಚಾರಗಳಿಂದ ನಲುಗಲಿದೆ. ಒಂದು ಕಡೆ ಅಕಾಲಿಕ ಮಳೆ ಸುರಿದು ಪ್ರವಾಹಗಳು ಸೃಷ್ಟಿಯಾಗಬಹುದು, ಬಾಂಬ್‌ ಸಿಡಿಯುವ ಸಂಭವವಿದೆ, ಯುದ್ಧಗಳ ಭೀತಿ ಇದೆ ಎಂದು ಶ್ರೀಗಳು ಹೇಳಿದ್ದಾರೆ.

2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಅಕಾಲಿಕ ಮಳೆ, ಬಾಂಬ್ ಸಿಡಿಯುವ ಸಂಭವ, ಯುದ್ಧ ಭೀತಿ, ಜನರು ತಲ್ಲಣವಾಗುತ್ತಾರೆ, ಭೂಕಂಪನ, ಜಲ ಕಂಟಕ ಎದುರಾಗಲಿದೆ, ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣವಿದೆ. ಅಸ್ಥಿರತೆ, ಯುದ್ಧ ಭೀತಿ. ಅಣು ಬಾಂಬ್ ಸ್ಫೋಟವಾಗುವ ಅವಕಾಶವಿದೆ. ಜಗತ್ತಿಗೆ ವಿನಾಶ, ಜಗತ್ತಿಗೆ ಅಪಾಯ, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸುತ್ತಾರೆ ಎಂದರು.

ಅಂತೆಯೇ ಭೂಕಂಪನ, ಜಲಕಂಟಕದಿಂದ ಜನರು ತಲ್ಲಣಗೊಳ್ಳುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ಅವರ ಪ್ರಕಾರ ಈ ವರ್ಷದಲ್ಲಿ ಜಗತ್ತಿನಲ್ಲಿ ಇಬ್ಬರು ಪ್ರಧಾನಿಗಳು ಸಾವು ಕಾಣಬಹುದು ಶಂಕಿಸಿದ್ದಾರೆ. ಅಲ್ಲದೆ ಜಗತ್ತಿಗೆ ವಿನಾಶ, ಜಗತ್ತಿಗೆ ಅಪಾಯ, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸುತ್ತಾರೆ. ಅಂದರೆ ಜಗತ್ತಿನಲ್ಲಿ ಧರ್ಮಗಳ ನಡುವೆ ಸಂಘರ್ಷ ನಡೆಯುವ ಅಪಾಯವಿದೆ ಎಂದು ಶ್ರೀಗಳು ಹೇಳಿದ್ದಾರೆ.

ದೈವ ನಂಬುವುದೊಂದೇ ಪರಿಹಾರ
ಇನ್ನು ಈ ಸಮಸ್ಯೆಗಳಿಗೆಲ್ಲಾ ಪರಿಹಾರದ ವಿಚಾರವಾಗಿಯೂ ಮಾತನಾಡಿರುವ ಶ್ರೀಗಳು, ಜನರು ದೈವ ನಂಬುವುದೊಂದೇ ಪರಿಹಾರ, ದೈವ ಮೊರೆ ಹೋಗಬೇಕು ಎಂದು ಶ್ರೀಗಳು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!