ಕುಂದಾಪುರ ಜೇಸಿಸ್‌ ಘಟಕ ಅಧ್ಯಕ್ಷರಾಗಿ ಚಂದನ್ ಗೌಡ ಆಯ್ಕೆ

ಕುಂದಾಪುರ: ಭಾರತೀಯ ಜೇಸಿಸ್ ನ ವಲಯ 15 ರ ಹಿರಿಯ ಹಾಗೂ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಕುಂದಾಪುರದ 50ನೇ ವರ್ಷದ (ಸುವರ್ಣ ಮಹೋತ್ಸವ ವರ್ಷ) ಘಟಕ ಅಧ್ಯಕ್ಷರಾಗಿ ಜೇ.ಎಫ್.ಎಮ್. ಚಂದನ್ ಗೌಡ ಆಯ್ಕೆಯಾಗಿರುತ್ತಾರೆ.

2007 ರಲ್ಲಿ ಜೂನಿಯರ್ ಜೇಸಿ ಸದಸ್ಯರಾಗಿ ಘಟಕಕ್ಕೆ ಸೇರ್ಪಡೆಗೊಂಡು ವಿವಿಧ ಹುದ್ದೆಗಳನ್ನು ನಿರ್ವಹಿಸಿ, 2010 ರಲ್ಲಿ ಜೂನಿಯರ್ ಜೇಸಿ ಅಧ್ಯಕ್ಷರಾಗಿ ಅತ್ಯುತ್ತಮ ಯುವ ಜೇಸಿ ಅಧ್ಯಕ್ಷ ಪ್ರಶಸ್ತಿ ವಿಜೇತರಾದವರು.

2011 ರಲ್ಲಿ ಜೇಸಿಐ ಕುಂದಾಪುರದ ಸದಸ್ಯರಾಗಿ ಘಟಕದ ಯುವ ಜೇಸಿ ವಿಭಾಗದ ಸಂಯೋಜಕರಾಗಿ, ಕಾರ್ಯಕ್ರಮಗಳ ನಿರ್ದೇಶಕರಾಗಿ, ಸಪ್ತಾಹದ ಯೋಜನಾಧಿಕಾರಿಯಾಗಿ, ಕ್ರೀಡಾ ಸಂಯೋಜಕರಾಗಿ,
ಕೋಶಾಧಿಕಾರಿಯಾಗಿ, ಆಡಳಿತ ವಿಭಾಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

10 ಜೇಸಿಐ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಾಗೂ 12 ವಲಯ ಜೇಸಿಐ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾರೆ.
ಉತ್ತಮ ಶಟಲ್ ಬ್ಯಾಡ್ಮಿಂಟನ್ ಆಟಗಾರರಾಗಿ ಹಲವಾರು ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಪಡೆದಿರುತ್ತಾರೆಂದು ಜೇಸಿಐ ಕುಂದಾಪುರ ಅಧ್ಯಕ್ಷರಾದ ಜೇಸಿ ಸುಧಾಕರ್ ಕಾಂಚನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!