ಒಂದು ಕಾಲದಲ್ಲಿ ಬಂಟರಿಗೆ ಕೃಷಿಯೇ ಆಧಾರ: ಕ್ಯಾ.ಬ್ರಿಜೇಶ್ ಚೌಟಬಂಟರ ಕ್ರೀಡಾ ಕೂಟದ ಸಮಾರೋಪ
ಸುರತ್ಕಲ್: ಒಂದು ಕಾಲದಲ್ಲಿ ಬಂಟರಿಗೆ ಕೃಷಿಯೇ ಆಧಾರವಾಗಿತ್ತು. ಕೂಡುಕುಟುಂಬದೊಂದಿಗೆ ಪ್ರೀತಿ ಬಾಂಧವ್ಯದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಬಂಟರು ಬದಲಾದ ಕಾಲಘಟ್ಟದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬದುಕಲಾರಭಿಸಿದರು. ಕೋಲ, ನೇಮ ಬಲಿ ಮೊದಲಾದ ಆಚರಣೆಗಳಿಂದ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಬಂಟರು ಮುಂದೆಯೂ ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು.
ಸುರತ್ಕಲ್ ಗೋವಿಂದ ದಾಸ ಕಾಲೇಜ್ ನ ಮೈದಾನದಲ್ಲಿ ಬಂಟರ ಸಂಘ, ಸುರತ್ಕಲ್ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಬಂಟರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಂಟರಲ್ಲಿನ ಕೂಡು ಕುಟುಂಬ ಇಂದು ಕಡಿಮೆಯಾದರೂ ಇಂತಹ ಕ್ರೀಡಾಕೂಟಗಳನ್ನು ಬಂಟರ ಸಂಘಗಳು ಆಯೋಜಿಸುವಾಗ ನಾವು ಒಂದೇ ಸೂರಿನಡಿ ಸೇರಿದಾಗ ಪ್ರೀತಿ ಬಾಂಧವ್ಯ ಹುಟ್ಟುತ್ತದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದವರು ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ ಮಾತನಾಡಿ ಯುವಕರನ್ನು, ಯುವತಿಯರನ್ನು ಒಂದೆಡೆ ಸೇರಿಸಲು ಇಂತಹ ಕ್ರೀಡಾಕೂಟ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದವರು ತಿಳಿಸಿದರು. ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ ಮಂಗಳೂರು ತಾಲೂಕಿನಲ್ಲಿರುವ ಬಂಟರ ಸಂಘಗಳಲ್ಲಿ ಸುರತ್ಕಲ್ ಬಂಟರ ಸಂಘ ಎಲ್ಲರಿಗೂ ಒಂದು ಮಾದರಿ ಸಂಘವಾಗಿ ಬೆಳೆದಿದೆ. ಅಗ್ರಪಂಕ್ತಿಯ ಸಂಘಟನೆಯಾಗಿ ಸಮಾಜಮುಖಿಯಾಗಿ ಬೆಳೆದಿರುವ ಸುರತ್ಕಲ್ ಬಂಟರ ಸಂಘ ಕ್ರೀಡೆ, ಸಾಂಸ್ಕೃತಿಕ ಹೀಗೆ ಎಲ್ಲಾ ರಂಗದಲ್ಲೂ ಮುನ್ನಡೆಯನ್ನು ಸಾಧಿಸಿಕೊಂಡು ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಮಾತನಾಡಿ ಕ್ರೀಡೆಯ ಮೂಲಕ ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ಮಾಡಲಾಗಿದೆ. ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮದ ಸದಸ್ಯರು ಕ್ರೀಡಾಕೂಟ ದಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿ ಗೊಳಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಕೋಶಾಧಿಕಾರಿ ಸಿಎ ರಾಮಮೋಹನ್ ರೈ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಯತಾಥ್೯ ಸೋಶಿಯಲ್ ನ ಸ್ಥಾಪಕಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ, ಶ್ರೀ ಡೆವಲಪರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು, ಸುರತ್ಕಲ್ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕುಳಾಯಿಗುತ್ತು ರೋಹಿತಾಕ್ಷ ರೈ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಭವ್ಯಾ ಎ ಶೆಟ್ಟಿ, ಸಂಘದ ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜೀರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಮದ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಜಯರಾಮ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಗಳಾದ ಶಿಶಿರ್ ಶೆಟ್ಟಿ, ಬಬಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಬಬಿತಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಅತಿಥಿಗಳು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಪಥ ಸಂಚಲನದಲ್ಲಿ ಇಡ್ಯಾ ಗ್ರಾಮ ಪ್ರಥಮ ಸ್ಥಾನವನ್ನು ಗಳಿಸಿತು. ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಸುರತ್ಕಲ್ ಗ್ರಾಮ ತನ್ನದಾಗಿಸಿಕೊಂಡಿತು. ಲಕ್ಕಿಕೂಪನ್ ಮೂಲಕ ಅದೃಷ್ಟಶಾಲಿಗಳಾಗಿ ಬಂಟ ವೀರ ಬಹುಮಾನವನ್ನು ರಂಜಿತ್ ಶೆಟ್ಟಿ, ಬಂಟ ಸಿರಿಯಾಗಿ ಸುರೇಖ ಶೆಟ್ಟಿ, ಬಂಟ ಕುವರನಾಗಿ ಶ್ರವಣ್ ಶೆಟ್ಟಿ ಬಂಟ ಕುವರಿಯಾಗಿ ತನಿಷಾ ಶೆಟ್ಟಿ ಬಹುಮಾನ ಪಡೆದರು. ಶಿಶಿರ್ ಶೆಟ್ಟಿ ಸ್ವಾಗತಿಸಿದರು. ಬಬಿತಾ ಶೆಟ್ಟಿ ವಂದಿಸಿದರು. ರಾಜೇಶ್ವರಿ ಡಿ ಶೆಟ್ಟಿ ಮತ್ತು ಸುಧಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.