ರಾಷ್ಟ್ರಮಟ್ಟದ ಕಲೋತ್ಸವ ಶಾಸ್ತ್ರಿಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ- ವಿದ್ಯಾರ್ಥಿನಿಗೆ ಸನ್ಮಾನ

ಕುಂದಾಪುರ: ಶಿಕ್ಷಣ ಮಂತ್ರಾಲಯ, ಭಾರತ ಸರಕಾರವು ನಡೆಸಿದ ರಾಷ್ಟ್ರಮಟ್ಟದ 2023-24ನೇ ಸಾಲಿನ ಕಲೋತ್ಸವದ ಶಾಸ್ತ್ರಿಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್.ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಾರ್ಗಿ ದೇವಿಯ ಪೋಷಕರಾದ ಅಶೋಕ್ ಸುವರ್ಣ ಮತ್ತು ನಾಟ್ಯ ಗುರು
ವಿದುಷಿ ಪ್ರವಿತಾ ಅಶೋಕ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದೊ0ದು ಸುಪ್ತ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಮುನ್ನಡೆದರೆ ಯಶಸ್ಸು ಸಾಧ್ಯ ಎಂದರು.ಸಂಸ್ಥೆಯ ಪ್ರಾಂಶುಪಾಲೆ ಡಾ.ಚಿಂತನಾ ರಾಜೇಶ್ ಪ್ರತಿಭಾನ್ವಿತೆಯನ್ನು ಸನ್ಮಾನಿಸಿ ಮಾತನಾಡಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳೂ ಪ್ರತಿಭಾ ಸಂಪನ್ನರಾಗುವ0ತೆ ಆಶಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!